ADVERTISEMENT

ವಿಟಿಯು ಕುಲಪತಿಯಾಗಿ ಎಸ್‌.ವಿದ್ಯಾಶಂಕರ್‌ ನೇಮಕ: ಹೈಕೋರ್ಟ್‌ ತುರ್ತು ನೋಟಿಸ್‌

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 21:30 IST
Last Updated 18 ಜೂನ್ 2025, 21:30 IST
<div class="paragraphs"><p>ಬೆಳಗಾವಿಯ ವಿಟಿಯು ಕ್ಯಾಂಪಸ್‌ ‘ಜ್ಞಾನಸಂಗಮ’ದ ನೋಟ</p></div>

ಬೆಳಗಾವಿಯ ವಿಟಿಯು ಕ್ಯಾಂಪಸ್‌ ‘ಜ್ಞಾನಸಂಗಮ’ದ ನೋಟ

   

ಬೆಂಗಳೂರು: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಕುಲಪತಿ ಎಸ್‌.ವಿದ್ಯಾಶಂಕರ್‌ ನೇಮಕವನ್ನು ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ವಿಟಿಯುಗೆ ತುರ್ತು ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಪ್ರಾಧ್ಯಾಪಕರಾದ ಹಾಸನದ ಬಿ.ಯೋಗೇಶ್‌ ಮತ್ತು ಕೆ.ಎ.ವೇಣುಗೋಪಾಲ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್‌.ಟಿ.ನರೇಂದ್ರ ಪ್ರಸಾದ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಕುಲಪತಿ ವಿದ್ಯಾಶಂಕರ್‌ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿದೆ.

ADVERTISEMENT

‘ವಿಟಿಯು ಅಕಾಡೆಮಿಕ್‌ ಸೆನೆಟ್‌ ಮತ್ತು ಬಾಹ್ಯ ಮಂಡಳಿಯ ಸದಸ್ಯರನ್ನೇ ಒಳಗೊಂಡಿದ್ದ ವಿಟಿಯು ಕುಲಪತಿ ಶೋಧನಾ ಸಮಿತಿಯ ಶಿಫಾರಸಿಗೆ ಅನುಗುಣವಾಗಿ ಈ ನೇಮಕಾತಿ ಮಾಡಲಾಗಿದೆ. ಇದು ಯುಜಿಸಿ ನಿಬಂಧನೆಗಳು–2018 ಮತ್ತು ವಿಟಿಯು ಕಾಯ್ದೆಯ ಉಲ್ಲಂಘನೆಯಾಗಿದ್ದು ಈ ನೇಮಕಾತಿಯನ್ನು ರದ್ದುಪಡಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.