ADVERTISEMENT

ಬಾಂಗ್ಲದೇಶದಲ್ಲಿ ರಾಜ್ಯದ ‘ಸಕಾಲ’

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2018, 17:12 IST
Last Updated 15 ಡಿಸೆಂಬರ್ 2018, 17:12 IST

ಚಿತ್ರದುರ್ಗ: ಕಾಲಮಿತಿಯೊಳಗೆ ನಾಗರಿಕರಿಗೆ ಸೇವೆ ಒದಗಿಸುವ ‘ಸಕಾಲ ಸೇವೆ’ಯನ್ನು ಬಾಂಗ್ಲದೇಶ ಕೂಡ ಅನುಷ್ಠಾನಗೊಳಿಸಲು ಮುಂದಾಗಿದೆ.

‘ಬಾಂಗ್ಲದೇಶದ ತಂಡವೊಂದು ಸಕಾಲದ ಬಗ್ಗೆ ಒಂದು ವರ್ಷದಿಂದ ಅಧ್ಯಯನ ನಡೆಸಿದೆ. ರಾಜ್ಯಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ. ವಿನೂತನ ಯೋಜನೆ ಅನುಷ್ಠಾನಕ್ಕೆ ಅಲ್ಲಿನ ಸರ್ಕಾರ ಉತ್ಸುಕತೆ ತೋರಿದೆ’ ಎಂದು ಸಕಾಲ ಮಿಷನ್‌ ಆಡಳಿತಾಧಿಕಾರಿ ಕೆ.ಮಥಾಯ್‌ ಸುದ್ದಿಗಾರರಿಗೆ ಶನಿವಾರ ಮಾಹಿತಿ ನೀಡಿದರು.

‘ಬಾಂಗ್ಲದೇಶದ 1,500ಕ್ಕೂ ಹೆಚ್ಚು ಅಧಿಕಾರಿಗಳಿಗೆ ಆರು ಹಂತಗಳಲ್ಲಿ ತರಬೇತಿ ನೀಡಲಾಗಿದೆ. ಸಕಾಲ ಸೇವೆ ಜಾರಿಗೊಳಿಸುವ ಪ್ರಕ್ರಿಯೆಗಳು ಈಗಾಗಲೇ ಅಲ್ಲಿ ಆರಂಭವಾಗಿವೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.