ADVERTISEMENT

ಈಶಾನ್ಯ ಸಾರಿಗೆ ನಿಗಮಕ್ಕೆ ₹ 5 ಲಕ್ಷ ಬಹುಮಾನ

‘ಸಕ್ಷಮ’ ತೈಲೋತ್ಪನ್ನ ಸಂರಕ್ಷಣೆ ಅಭಿಯಾನಕ್ಕೆ ಚಾಲನೆ ನೀಡಿದ ಗೃಹಸಚಿವ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 19:57 IST
Last Updated 16 ಜನವರಿ 2020, 19:57 IST

ಬೆಂಗಳೂರು:ಇಂಧನ ಸಂರಕ್ಷಣೆ ಮತ್ತು ಉಳಿತಾಯದಲ್ಲಿ ಅತ್ಯುತ್ತಮ ಸಾಧನೆ ತೋರಿದ ರಸ್ತೆ ಸಾರಿಗೆ ನಿಗಮಗಳಿಗೆ ಗುರುವಾರ ನಗರದಲ್ಲಿ ಪೆಟ್ರೋಲಿಯಂ ಸಂರಕ್ಷಣಾ ಸಂಶೋಧನಾ ಸಂಸ್ಥೆ (ಪಿಸಿಆರ್‌ಎ) ವತಿಯಿಂದಪ್ರಶಸ್ತಿ, ನಗದು ಬಹುಮಾನ ನೀಡಿ ಗೌರವಿಸಲಾಯಿತು.

4,000ಕ್ಕಿಂತ ಹೆಚ್ಚು ಬಸ್‌ಗಳಿರುವ ನಿಗಮದ ವಿಭಾಗದಲ್ಲಿ ಅತ್ಯಂತ ಹೆಚ್ಚು ಇಂಧನ ದಕ್ಷತೆ ತೋರಿದ ಕಲಬುರ್ಗಿ ಈಶಾನ್ಯ ರಸ್ತೆ ಸಾರಿಗೆ ನಿಗಮವು ಮೊದಲ ಬಹುಮಾನಕ್ಕೆ (₹5 ಲಕ್ಷ) ಆಯ್ಕೆಯಾಗಿದ್ದು, ನವದೆಹಲಿಯಲ್ಲಿ ಗುರುವಾರ ಪ್ರಶಸ್ತಿ ಸ್ವೀಕರಿಸಿತು.ಇಂಧನ ಸಂರಕ್ಷಣೆ ಮತ್ತು ಉಳಿತಾಯದಲ್ಲಿ ಅತ್ಯುತ್ತಮ ಸಾಧನೆ ತೋರಿದ ನಾಲ್ಕು ನಿಗಮಗಳ ತಲಾ ಮೂರು ಡಿಪೊಗಳಿಗೆ ತಲಾ ₹50 ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ವಿಜೇತರಿಗೆ ಬಹುಮಾನ: ತೈಲ ಸಂರಕ್ಷಣೆ ಕುರಿತು ರಾಷ್ಟ್ರೀಯ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌, ಜಪಾನ್‌ ಪ್ರವಾಸ ಹಾಗೂ ₹30 ಸಾವಿರ ನಗದು ಬಹುಮಾನ ಘೋಷಿಸಲಾಯಿತು.

ADVERTISEMENT

ಇಂಧನ ಸಂರಕ್ಷಣೆ: ಉತ್ತಮ ಡಿಪೊ ಪ್ರಶಸ್ತಿ ಪ್ರಕಟ

ನಿಗಮ;ಡಿಪೊಗಳು; ಪ್ರಶಸ್ತಿ ಪುರಸ್ಕೃತರು

ಈಶಾನ್ಯ ಸಾರಿಗೆ;ವಿಜಯಪುರ, ಬಸವನ ಬಾಗೇವಾಡಿ, ಸಿಂದಗಿ; ಆನಂದ ಹೂಗಾರ, ಬಿ.ಜಿ. ರಜಪೂತ, ನದಾಫ, ಸಿ.ಜೆ. ಜಬಣ್ಣವರ,ಎ.ಎಚ್. ಮಧುಭಾವಿ, ಎಸ್.ಜೆ. ಲಮಾಣಿ

ಕೆಎಸ್‌ಆರ್‌ಟಿಸಿ; ಸುಳ್ಯ, ಪಾವಗಡ, ಅರಸೀಕೆರೆ;ಸುಂದರ್‌ ರಾಜ್, ಆರ್. ವೇಣುಗೋಪಾಲ, ಹನುಮಂತರಾಯಪ್ಪ, ಜಿ. ವಿಜಯ್‌ಕುಮಾರ್, ಎಚ್‌.ಪಿ. ಚನ್ನಬಸವೇಗೌಡ, ಬಿ.ಎಸ್. ನಾಗರಾಜಮೂರ್ತಿ

ಬಿಎಂಟಿಸಿ;ಕೆ.ಆರ್.ಪುರ, ಹೆಣ್ಣೂರು, ಆರ್.ಟಿ. ನಗರ; ಎಂ.ಸಿ. ಮುನಿಕೃಷ್ಣಪ್ಪ, ಎಂ. ಅಮರೇಶ್, ಎಸ್.ಎನ್. ಪ್ರಶಾಂತಕುಮಾರ್ ನಾಯ್ಕ್‌, ಎಂ. ನವೀನ್‌ಕುಮಾರ್, ಸಿ. ವೆಂಕಟಸ್ವಾಮಿ, ಎಚ್.ಎಂ. ರಮೇಶ್‌

ವಾಯವ್ಯ ಸಾರಿಗೆ; ನವಲಗುಂದ, ಅಥಣಿ, ಬಾದಾಮಿ; ಮಹೇಶ್ವರಿ ಬೈಲ ಪತ್ತಾರ, ಕಿರಣಕುಮಾರ್ ಬಸಾಪುರ, ಪಿ.ಆರ್. ಕಿರಣಗಿ, ಎನ್.ಟಿ. ಪಾಟೀಲ, ಡಿ.ಎಸ್. ಬಿರಾದಾರ, ಎಸ್.ಬಿ. ಭಾಯ್‌ಸರ್ಕಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.