ADVERTISEMENT

‘ಬಿಜೆಪಿಯಲ್ಲೇ ಮೂರು ಗುಂಪು’- ಶಾಸಕ ಸಾ.ರಾ ಮಹೇಶ್‌

ರಾಜಕಾರಣದಲ್ಲಿ ಹಾವು, ಚೇಳು ಇರುತ್ತವೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2019, 20:15 IST
Last Updated 30 ಸೆಪ್ಟೆಂಬರ್ 2019, 20:15 IST
ಸಾ.ರಾ.ಮಹೇಶ್‌
ಸಾ.ರಾ.ಮಹೇಶ್‌   

ಮೈಸೂರು: ‘ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರವನ್ನು ಅಪವಿತ್ರ ಮೈತ್ರಿ ಎಂದು ಆಗ ಲೇವಡಿ ಮಾಡುತ್ತಿದ್ದರು. ಆದರೆ, ಈಗ ಬಿಜೆಪಿಯಲ್ಲಿಯೇ ಮೂರು ಗುಂಪುಗಳಿವೆ’ ಎಂದು ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್ ಸೋಮವಾರ ಇಲ್ಲಿ ಹೇಳಿದರು.

‘ಅನರ್ಹ ಶಾಸಕರು, ಬಿಜೆಪಿಯಲ್ಲೇ ಇರುವ ವಿರೋಧಿಗಳು ಹಾಗೂ ಸಚಿವ ಸ್ಥಾನ ಸಿಗದ ಗುಂಪಿನಿಂದಾಗಿ ಯಡಿಯೂರಪ್ಪ ಅವರಿಗೆ ತೊಂದರೆಯಾಗುತ್ತಿದೆ. ರಾಜಕಾರಣದಲ್ಲಿ ಹಾವು, ಚೇಳು ಇರುತ್ತವೆ. ನೋಡಿ ಮಾಡಿ ಸರ್ಕಾರ ನಡೆಸಬೇಕು. ತುಂಬಾ ಕಷ್ಟಪಟ್ಟು ಮುಖ್ಯಮಂತ್ರಿ ಆಗಿದ್ದಾರೆ. ಇನ್ನು ಉಳಿದ ಅವಧಿಗೆ ಅವರೇ ಇರಬೇಕು’ ಎಂದರು.

ಆದಿಚುಂಚನಗಿರಿ ಶ್ರೀಗಳ ದೂರವಾಣಿ ಕದ್ದಾಲಿಕೆ ಕುರಿತು, ‘ಈ ಪ್ರಕರಣದಲ್ಲಿ ಕುಮಾರಣ್ಣ ಅವರನ್ನು ಸಿಲುಕಿಸಲು ಷಡ್ಯಂತ್ರ ನಡೆಯುತ್ತಿದೆ. ತನಿಖೆಯೇ ಇನ್ನೂ ಪೂರ್ಣಗೊಂಡಿಲ್ಲ. ಆದರೆ, ಸಚಿವ ಆರ್.ಆಶೋಕ ಒಂದು ರೀತಿಯಲ್ಲಿ ಹೇಳಿಕೆ ಕೊಡುತ್ತಾರೆ, ಸಿಬಿಐ ನಡೆಸುತ್ತಿರುವ ತನಿಖೆಯ ವಿಚಾರಗಳು ಬಿಜೆಪಿ ನಾಯಕರಿಗೆ ಗೊತ್ತಾಗುತ್ತಿದೆಯೇ’ ಎಂದು ಪ್ರಶ್ನಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.