ADVERTISEMENT

ಮಠಾಧೀಶರು ಭ್ರಷ್ಟರು: ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 16:28 IST
Last Updated 7 ಫೆಬ್ರುವರಿ 2021, 16:28 IST
ಶಾಂತವೀರ ಸ್ವಾಮೀಜಿ
ಶಾಂತವೀರ ಸ್ವಾಮೀಜಿ   

ಹೊಸದುರ್ಗ: ಹನ್ನೆರಡನೇ ಶತಮಾನದ ಬಸವಾದಿ ಶಿವಶರಣರು ಜಾತ್ಯತೀತ ಸಮಾಜ ನಿರ್ಮಿಸಲು ಶ್ರಮಿಸಿದ್ದರು. ಆದರೆ, ಇಂದು ಎಲ್ಲಾ ರಂಗದಲ್ಲಿ ಜಾತಿ ವ್ಯವಸ್ಥೆ ಪ್ರಬಲವಾಗುತ್ತಿದೆ. ಜಾತಿಯನ್ನು ಮುಂದಿಟ್ಟುಕೊಂಡು ರಾಜಕಾರಣಿಗಳಿಂದ ಅನುದಾನ ಕೇಳುವ ಮಠಾಧೀಶರು ಭ್ರಷ್ಟರಾಗು ತ್ತಿದ್ದಾರೆ ಎಂದು ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಬೆಂಗಳೂರು ನಗರ ಜಿಲ್ಲೆ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಭಾನುವಾರ ಪಟ್ಟಣದಲ್ಲಿ ಆಯೋಜಿಸಿದ್ದ ‘ಕನ್ನಡ ಸೇವಾರತ್ನ’ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಸಮಾಜದಲ್ಲಿ ಜಾತಿ ವ್ಯವಸ್ಥೆ, ಅನಾಚಾರ ಹೆಚ್ಚಾಗುತ್ತಿದೆ. ಕೆಲವು ರಾಜಕಾರಣಿಗಳು ಜಾತಿ ಇಟ್ಟುಕೊಂಡು ಬಲಾಢ್ಯರಾಗುತ್ತಿದ್ದಾರೆ. ಮೀಸಲಾತಿ ಎಲ್ಲಾ ವರ್ಗದವರಿಗೂ ಬೇಕಾಗಿದೆ. ಕೇವಲ ಬಲಾಢ್ಯ ಜಾತಿಗಳು ಮೀಸಲಾತಿ ಪಡೆದುಕೊಂಡರೆ ಸಣ್ಣಪುಟ್ಟ ತಳಸಮುದಾಯದವರು ಏನಾಗಬೇಕು’ ಎಂದು ಪ್ರಶ್ನಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.