ADVERTISEMENT

ಸ್ವಾತಂತ್ರ್ಯ ಹೋರಾಟಗಾರರ ಕಲಾಕೃತಿ ಆನಾವರಣ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2022, 9:43 IST
Last Updated 23 ಏಪ್ರಿಲ್ 2022, 9:43 IST
   

ಹರಿಹರ: ಭಾರತದ ಸ್ವಾತಂತ್ರ್ಯದ ಸಂಗ್ರಾಮದಲ್ಲಿ ಭಾಗವಹಿಸಿದ್ದ ಪಂಚಮಸಾಲಿ ಸಮಾಜದ ಏಳು ಮಹನೀಯರ ಕಲಾಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಬೆಳವಾಡಿ ರಾಣಿ ಮಲ್ಲಮ್ಮ, ಕೆಳದಿ ರಾಣಿ ಚೆನ್ನಮ್ಮ, ಕಿತ್ತೂರು ರಾಣಿ ಚನ್ನಮ್ಮ, ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಮೈಲಾರ ಮಹದೇವಪ್ಪ, ಏಕಿಕರಣ ಹೋರಾಟಗಾರ ಅದರಂಚಿ ಶಂಕರ ಗೌಡ, ಕರ್ನಾಟಕ ಕಾಲೇಜು ಆರಂಭಿಸಿದ ಅಠರಾಳ ರುದ್ರಗೌಡ, ಅಂಬೇಡ್ಕರ್‌ ಅವರನ್ನು ಪ್ರಾಂಶುಪಾಲರಾಗಿ ಕರೆದಿದ್ದ ಕಂಬಳಿ ಸಿದ್ದಪ್ಪ ಅವರ ಕಲಾಕೃತಿಗಳು ಅನಾವರಣಗೊಂಡವು.

ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಶಾಸಕ ಅಶೋಕ ಖೇಣಿ, ಶಾಸಕ ಸಂಗಮೇಶ್ ನಿರಾಣಿ, ಶಾಸಕ ಸೋಮಣ್ಣ ಬೇವಿನಮಠದ, ಮಾಜಿ ಸಚಿವ ವಿನಯ ಕುಲಕರ್ಣಿ, ಶಾಸಕ ಪಿ. ಟಿ ಪರಮೇಶ್ವರ ನಾಯ್ಕ್‌ ಅನಾವರಣಗೊಳಿಸಿದರು. ವಚನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.