ADVERTISEMENT

ಸಿದ್ದರಾಮಯ್ಯ ಕಚ್ಚೆಹರುಕ ಎನ್ನುವುದರಲ್ಲಿ ತಪ್ಪೇನಿದೆ?: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2022, 12:34 IST
Last Updated 12 ಸೆಪ್ಟೆಂಬರ್ 2022, 12:34 IST
ಸಿ.ಟಿ.ರವಿ
ಸಿ.ಟಿ.ರವಿ   

ಬೆಂಗಳೂರು: ‘ಸಿ.ಟಿ.ರವಿ– ಲೂಟಿ ರವಿ’ ಎಂದು ಹೇಳುವುದಾದರೆ, ‘ಸಿದ್ದರಾಮಯ್ಯ ಪೆದ್ದ, ಇಲ್ಲವೇ ಕಚ್ಚೆಹರುಕ’ ಅನ್ನುವುದರಲ್ಲಿ ತಪ್ಪೇನಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

‘ಸಿದ್ದರಾಮಯ್ಯ ಕಚ್ಚೆಹರುಕ ಎಂಬ ಪದ ಬಳಕೆಗೆ ಈಗಲೂ ಬದ್ಧನಾಗಿದ್ದೇನೆ. ಈ ವಿಚಾರವನ್ನು ನಾನು ಈಗಾಗಲೇ ಸಾರ್ವಜನಿಕ ಚರ್ಚೆಗೂ ಬಿಟ್ಟಿದ್ದೇನೆ. ಚರ್ಚೆ ನಡೆಯಲಿ ಬಿಡಿ’ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

‘ಕಚ್ಚೆ ಹರುಕ ಅನ್ನುವ ವಿಚಾರ ನನ್ನ ಮಾತಲ್ಲ. ಬಿಜೆಪಿಯ ಆರೋಪವೂ ಅಲ್ಲ. ಇದು ಮೈಸೂರಿನ ಮಾತು. ಲೋಕಲ್‌ ನ್ಯೂಸ್‌. ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಎಂದರೆ, ಅವರ ಒಂದು ಕಾಲದ ಒಡನಾಡಿ ಎಚ್.ವಿಶ್ವನಾಥ್ ಅವರನ್ನು ಕೇಳಬಹುದು. ಇವರಿಬ್ಬರದೂ ಒಂದೇ ರಕ್ತ. ಹೀಗಾಗಿ ಅವರಲ್ಲಿ ಹೆಚ್ಚಿನ ಮಾಹಿತಿ ಇರುತ್ತದೆ. ಸೂಕ್ತ ಕಾಲ ಬಂದಾಗ ಅವರೇ ಹೇಳಬಹುದು’ ಎಂದು ರವಿ ಹೇಳಿದರು.

ADVERTISEMENT

‘ಸಿದ್ದರಾಮಯ್ಯ ಅವರು ನನ್ನ ಬಗ್ಗೆ ಪ್ರಾಸಬದ್ಧವಾಗಿ ಸಿಟಿಯನ್ನು ಲೂಟಿ ಎನ್ನುವುದಾದರೆ ಸಿದ್ದುವನ್ನು ಪೆದ್ದು ಅನ್ನಬಹುದಲ್ಲ. ಆದರೆ, ನಮಗೆ ಸಂಸ್ಕೃತಿ ಇದೆ. ಸಾರ್ವಜನಿಕ ಜೀವನದಲ್ಲಿ ಆರೋಪಗಳನ್ನು ಮಾಡುವಾಗ ದಾಖಲೆಗಳನ್ನು ಇಟ್ಟುಕೊಂಡು ಮಾತನಾಡಬೇಕು. ನನ್ನ ಬಗ್ಗೆ ಲೂಟಿ ಪದ ಬಳಕೆ ಮಾಡುವ ಇವರು ಸತ್ಯಹರಿಶ್ಚಂದ್ರನ ಮಕ್ಕಳಾ? ನನ್ನ ಬಗ್ಗೆ ಮಾತನಾಡುತ್ತಿರುವ ಇವರು ಬೇರೆಯವರ ಬಗ್ಗೆ ಮಾತನಾಡಲಿ ನೋಡೋಣ? ನಾನು ಹೇಳಬೇಕಾಗಿದ್ದನ್ನು ಸೂಕ್ಷ್ಮವಾಗಿ ಹೇಳಿದ್ದೇನೆ’ ಎಂದು ರವಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.