ಬೆಂಗಳೂರು: ‘ಧರ್ಮಸ್ಥಳದಲ್ಲಿ ಎಸ್‌ಐಟಿ ತನಿಖೆ ವೇಳೆ ಸ್ವತಂತ್ರ ಪತ್ರಕರ್ತರು ಹಾಗೂ ಯೂಟ್ಯೂಬರ್‌ಗಳ ಮೇಲೆ ನಡೆದ ದಾಳಿ ಖಂಡನೀಯ ಎಂದು ಪ್ರಗತಿಪರರು ಹಾಗೂ ಹೋರಾಟಗಾರರು ತಿಳಿಸಿದ್ದಾರೆ.
ಸಮಾನ ಮನಸ್ಕರಾದ ಕೆ.ಮರುಳಸಿದ್ದಪ್ಪ, ಆರ್.ಕೆ. ಹುಡಗಿ, ಪ್ರಭು ಖಾನಾಪುರೆ, ಮೀನಾಕ್ಷಿ ಬಾಳಿ, ಕೆ.ನೀಲಾ, ಕಾಶಿನಾಥ ಅಂಬಲಗಿ, ಅರ್ಜುನ ಭದ್ರೆ, ವಿಮಲಾ ಕೆ.ಎಸ್, ಗುರುರಾಜ ಹಗರೆ, ಲವಿತ್ರ ವಸ್ತ್ರದ, ಸುಜಾತಾ, ಸರ್ವೇಶ, ಟಿ. ಧನರಾಜ, ಮಹಾಂತೇಶ ಕಲಬುರಗಿ, ಅಕ್ಷತಾ ಹುಂಚದಕಟ್ಟೆ, ಅರುಣ್ ಜೋಳದಕೂಡ್ಲಿಗಿ ಸಹಿತ ಹಲವರು ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.