ADVERTISEMENT

ಮೈಸೂರು– ರೇವಾ ನಡುವೆ ವಿಶೇಷ ರೈಲು

​ಪ್ರಜಾವಾಣಿ ವಾರ್ತೆ
Published 27 ಜೂನ್ 2018, 20:12 IST
Last Updated 27 ಜೂನ್ 2018, 20:12 IST

ಮೈಸೂರು: ಮೈಸೂರು ಹಾಗೂ ಮಧ್ಯಪ್ರದೇಶದ ರೇವಾ ಪಟ್ಟಣದ ನಡುವೆ ವಿಶೇಷ ವಾರದ ರೈಲನ್ನು ನೈರುತ್ಯ ರೈಲ್ವೆ ಪರಿಚಯಿಸಿದೆ.

ಜೂನ್‌ 28ರಿಂದ ಜುಲೈ 22ರ ವರೆಗೆ ಈ ರೈಲು ಸಂಚರಿಸಲಿದೆ. ಮೈಸೂರಿನಿಂದ ಜೂನ್‌ 28, ಜುಲೈ 5, 12, 19ರಂದು, ರೇವಾ ಪಟ್ಟಣದಿಂದ ಜುಲೈ 1, 8, 15 ಹಾಗೂ 22ರಂದು ಸಂಚರಿಸಲಿದೆ.

ಮೈಸೂರು ನಿಲ್ದಾಣದಿಂದ ಹೊರಟು ಮಂಡ್ಯ, ಕೆಂಗೇರಿ, ಬೆಂಗಳೂರು ರೈಲು ನಿಲ್ದಾಣ, ಯಶವಂತಪುರ, ತುಮಕೂರು, ಅರಸೀಕೆರೆ, ಕಡೂರು, ಚಿತ್ರದು‌ರ್ಗ, ಬಳ್ಳಾರಿ, ಗುಂತಕಲ್‌, ಅದೋನಿ, ಮಂತ್ರಾಲಯ ರೋಡ್, ರಾಯಚೂರು, ಕೃಷ್ಣಾ, ಯಾದಗಿರಿ, ವಾಡಿ, ಕಲಬುರ್ಗಿ ಮೂಲಕ ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ಸಂಚರಿಸಿ ರೇವಾ ತಲುಪಲಿವೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.