ಬೆಂಗಳೂರು: ಕನ್ನಡ ಪ್ರಬಂಧ ಸಾಹಿತ್ಯಕ್ಕೆ ನಿರಂತರವಾಗಿ ಹೊಸ ಪ್ರತಿಭೆಗಳನ್ನು ಪರಿಚಯಿಸುವ ‘ಸುಧಾ ಯುಗಾದಿ ಪ್ರಬಂಧ ಸ್ಪರ್ಧೆ’ಯ 2025ರ ಸಾಲಿನ ಫಲಿತಾಂಶ ಪ್ರಕಟಗೊಂಡಿದ್ದು, ಹೊನ್ನಾಳಿಯ ಸದಾಶಿವ ಸೊರಟೂರು ಅವರ ‘ನಿನ್ನೆ ಯಾರದ್ದೊ ಇಂದು ನನ್ನದು’ ಪ್ರಬಂಧ ಮೊದಲ ಬಹುಮಾನ ಪಡೆದಿದೆ.
ಬೆಂಗಳೂರಿನ ಬಿ.ಆರ್. ಸತ್ಯನಾರಾಯಣ (‘ಊರಮ್ಮ’ಗಳ ನೆನಪಲ್ಲಿ) ಹಾಗೂ ಕೊಡಗಿನ ಮುಸ್ತಾಫ ಕೆ.ಎಚ್. (‘ಇದು ಬರೀ ಗಂಜಿಯಲ್ಲೋ ಅಣ್ಣಾ...’) ಅವರ ಪ್ರಬಂಧಗಳು ಎರಡನೇ ಮತ್ತು ಮೂರನೇ ಬಹುಮಾನ ಪಡೆದಿವೆ. ‘ಸುಧಾ ಯುಗಾದಿ ವಿಶೇಷಾಂಕ’ದಲ್ಲಿ ಪ್ರಕಟಗೊಂಡಿರುವ ಬಹುಮಾನಿತ ಪ್ರಬಂಧಗಳಿಗೆ ಕ್ರಮವಾಗಿ ₹15,000, ₹12,000 ಹಾಗೂ ₹10,000 ದೊರೆಯಲಿದೆ.
‘ದೇವರ ಕೋಣೆ’ (ನಳಿನಿ ಭೀಮಪ್ಪ), ‘ಅಳುವ ಕಡಲೊಳು ತೇಲಿ ಬರುತಲಿದೆ’ (ರವಿ ಚಂದರ್), ‘ಸಂತೆಯೆಂಬ ಪುಟ್ಟ ಪ್ರಪಂಚದೊಳಗೆ’ (ಸಂಜೋತಾ ಪುರೋಹಿತ್), ‘ನಡಿಗೆಯ ನೆಂಟ’ (ಬ್ಯಾಡರಹಳ್ಳಿ ಶಿವರಾಜ್) ಹಾಗೂ ‘ಆಲದ ಮರವೇ ಆಲದ ಮರವೇ’ (ಬಿ.ಎಂ. ಭಾರತಿ ಹಾದಿಗೆ) ಪ್ರಬಂಧಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ. ‘ಸುಧಾ’ದಲ್ಲಿ ಪ್ರಕಟಗೊಳ್ಳುವ ಈ ರಚನೆಗಳಿಗೆ ತಲಾ ₹2,000 ದೊರೆಯಲಿದೆ.
ಆರು ನೂರಕ್ಕೂ ಹೆಚ್ಚಿನ ಪ್ರಬಂಧಗಳು ಸ್ಪರ್ಧೆಗೆ ಬಂದಿದ್ದವು. ಹಿರಿಯ ಲೇಖಕಿ ಜಯಶ್ರೀ ಕಾಸರವಳ್ಳಿ ಹಾಗೂ ವಿಮರ್ಶಕ ಎಚ್. ದಂಡಪ್ಪ ಸ್ಪರ್ಧೆಯ ತೀರ್ಪುಗಾರರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.