ಜಿ. ಪರಮೇಶ್ವರ, ಗೃಹ ಸಚಿವ
ಬೆಂಗಳೂರು: ‘ಸುಹಾಸ್ ಶೆಟ್ಟಿಯ ಹತ್ಯೆಯಲ್ಲಿ ವಿದೇಶಿ ಸಂಪರ್ಕ ಇರುವ ಬಗ್ಗೆ ತನಿಖೆಯ ಬಳಿಕವಷ್ಟೇ ಗೊತ್ತಾಗಬೇಕಿದೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ತಿಳಿಸಿದರು.
‘ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ಕೊಡುತ್ತಿದ್ದಾರೆ. ತನಿಖೆ ಮುಗಿದ ನಂತರ ಸಂಪೂರ್ಣ ಮಾಹಿತಿ ಸಿಗುತ್ತದೆ. ಯಾರು ಸುಪಾರಿ ಕೊಟ್ಟಿದ್ದು, ಎಷ್ಟು ಕೊಟ್ಟರು ಎಲ್ಲವೂ ತನಿಖೆಯಿಂದ ಗೊತ್ತಾಗಬೇಕು’ ಎಂದು ಅವರು ಸುದ್ದಿಗಾರರಿಗೆ ಹೇಳಿದರು.
‘ಸುಹಾಸ್ ಶೆಟ್ಟಿ ಹೆಸರು ರೌಡಿಶೀಟರ್ ವಿಭಾಗದಲ್ಲಿ ದಾಖಲಾಗಿದೆ. ಒಮ್ಮೆ ಹೆಸರು ದಾಖಲಾದ ಮೇಲೆ ಇನ್ನೇನಂದು ಕರೆಯಬೇಕು? ಯಾವುದೇ ಪಕ್ಷದವರು ಆದರೂ ಅಷ್ಟೇ, ಒಮ್ಮೆ ರೌಡಿಶೀಟ್‌ಗೆ ಸೇರಿದ ನಂತರ ರೌಡಿಶೀಟರ್ ಎಂದೇ ಕರೆಯಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.