ADVERTISEMENT

ಪ್ರೇಮ ವಂಚನೆ ಪ್ರಕರಣ: ಶಾಸಕ ರಾಮದಾಸ್‌ಗೆ ವಿಶೇಷ ಕೋರ್ಟ್‌ ಸಮನ್ಸ್‌

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2019, 4:29 IST
Last Updated 22 ಅಕ್ಟೋಬರ್ 2019, 4:29 IST
ರಾಮದಾಸ್‌
ರಾಮದಾಸ್‌   

ಬೆಂಗಳೂರು: ಮದುವೆಯಾಗುತ್ತೇನೆ ಎಂದು ನಂಬಿಸಿ ಕೈಕೊಟ್ಟು ಪ್ರೇಮ ಕುಮಾರಿ ಅವರನ್ನು ವಂಚಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ದಲ್ಲಿ ಮೈಸೂರು ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್‌. ಎ.ರಾಮದಾಸ್ ವಿರುದ್ಧ ಕ್ರಿಮಿನಲ್‌ ಕೇಸು ದಾಖಲಿಸಿಕೊಂಡಿರುವ ಜನಪ್ರತಿ ನಿಧಿಗಳ ನ್ಯಾಯಾಲಯ ನವೆಂಬರ್‌ 11ಕ್ಕೆ ಹಾಜರಾಗುವಂತೆ ಸಮನ್ಸ್‌ ಜಾರಿಗೊಳಿಸಿದೆ.

ಈ ಕುರಿತಂತೆ ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾ ರಣೆಯ ವಿಶೇಷ ನ್ಯಾಯಾಲಯ’ದ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ ಸೋಮವಾರ ಆದೇಶಿಸಿದೆ.

ಪ್ರಕರಣವೇನು?: ‘ನನ್ನನ್ನು ಮದುವೆ ಯಾಗುತ್ತೇನೆ. ‍ಪತ್ನಿಯ ಸ್ಥಾನ ನೀಡು ತ್ತೇನೆ ಎಂದು ನಂಬಿಸಿ ನನ್ನ ಜೊತೆ ದೈಹಿಕ ಸಂಪರ್ಕ ಬೆಳೆಸಿದರು. ಆದರೆ ಮದುವೆಯಾಗದೆ ಮೋಸ ಮಾಡಿ ದ್ದಲ್ಲದೆ ಕಿರಿಯ ಸಹೋದರ ಶ್ರೀಕಾಂತದಾಸ್‌ ಅವರಿಂದ ನನಗೆ ಜೀವ ಬೆದರಿಕೆ ಹಾಕಿಸಿದ್ದಾರೆ’ ಎಂದು ಪ್ರೇಮಕುಮಾರಿ ರಾಮದಾಸ್ ವಿರುದ್ಧ ಮೈಸೂರಿನ ಸರಸ್ವ ತಿಪುರಂ ಠಾಣೆಯಲ್ಲಿ 2014ರ ಫೆಬ್ರುವರಿ 14ರಂದು ದೂರು ನೀಡಿದ್ದರು.

ADVERTISEMENT

ಈ ದೂರನ್ನು ಆಧರಿಸಿ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ‘ಬಿ‘ ರಿಪೋರ್ಟ್ ಸಲ್ಲಿಸಿದ್ದರು. ಇದನ್ನು ಪ್ರಶ್ನಿ ಸಿದ್ದ ಪ್ರೇಮಕುಮಾರಿ, ‘ಬಿ’ ರಿಪೋರ್ಟ್‌ ರದ್ದುಗೊಳಿಸಬೇಕು ಎಂದು ಕೋರಿ ‘ಪ್ರತಿಭಟನಾ ಅರ್ಜಿ’ ಸಲ್ಲಿಸಿದ್ದರು.

ಇತ್ತೀಚೆಗಷ್ಟೇ ಈ ಅರ್ಜಿ ವಿಚಾರಣೆಗೆ ಮಾನ್ಯ ಮಾಡಿದ್ದ ನ್ಯಾಯಾಧೀಶರು, ‘ಈ ಪ್ರಕರಣದಲ್ಲಿ ಫಿರ್ಯಾದುದಾರರಾದ ಪ್ರೇಮಕುಮಾರಿ ನೀಡಿರುವ ಹೇಳಿಕೆ ಯನ್ನು ಗಮನಿಸಿದಾಗ ಇದು ಸಂಜ್ಞೇಯ ಅಪರಾಧವಾಗಿರುವುದು ಮೇಲ್ನೋಟಕ್ಕೆ ಖಾತರಿಯಾಗುತ್ತದೆ. ಆದ್ದರಿಂದ ಇದು ವಿಚಾರಣೆಗೆ ಅರ್ಹವಾದ ಪ್ರಕರಣ. ಅಂತೆಯೇ ಆರೋಪಿ ಪ್ರಭಾವಿ ವ್ಯಕ್ತಿ ಎಂಬುದೂ ಕಂಡು ಬರುತ್ತದೆ’ ಎಂದು ಆದೇಶದಲ್ಲಿ ತಿಳಿಸಿದ್ದರು.

‘ಆರೋಪಿಯು ಸಚಿವರಾಗಿದ್ದ ವೇಳೆ ತಡರಾತ್ರಿಯಲ್ಲಿ ಪ್ರೇಮಕುಮಾರಿ ಮನೆಗೆ ಖಾಸಗಿ ಕಾರಿನಲ್ಲಿ ಬೆಂಗಾವಲು ಪಡೆ ಇಲ್ಲದೇ ಹೋಗುತ್ತಿದ್ದರು ಮತ್ತು ನಸುಕಿನಲ್ಲಿ ನಿರ್ಗಮಿಸುತ್ತಿದ್ದರು ಎಂಬ ಅಂಶದ ಬಗ್ಗೆ ಪೊಲೀಸರು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿಲ್ಲ. ಆದ್ದರಿಂದ ಭಾರತೀಯ ದಂಡ ಸಂಹಿತೆ-1862ರ ಕಲಂ 417 (ವಂಚನೆ) ಮತ್ತು 506ರ (ಬೆದರಿಕೆ) ಅನುಸಾರ ಕ್ರಿಮಿನಲ್‌ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರತಿದೂರು: ಪ್ರೇಮಕುಮಾರಿ ವಿರುದ್ಧ ರಾಮದಾಸ್ ಸಲ್ಲಿಸಿದ್ದ ಪ್ರತಿದೂರಿಗೆ ಸಂಬಂಧಿಸಿದಂತೆ ಆರೋಪಿಗಳಾದ ಪ್ರೇಮಕುಮಾರಿ ಎಂ.ಜಡೇದ, ಮಂಜುನಾಥ ಎಂ.ಜಡೇದ ಹಾಗೂ ಲೀಲಾವತಿ ಎಂ.ಜಡೇದ ವಿರುದ್ಧ ಇದೇ ನ್ಯಾಯಾಲಯ ದೋಷಾರೋಪ ನಿಗದಿ ಗೊಳಿಸಿ ವಿಚಾರಣೆ ಮುಂದೂಡಿದೆ.

‘ಪ್ರೇಮಕುಮಾರಿ ನನ್ನನ್ನು ಬೆದ ರಿಸಿ ಹಣ ಕೀಳಲು ಬ್ಲ್ಯಾಕ್‌ಮೇಲ್ ಮಾಡು ತ್ತಿದ್ದಾರೆ. ಇದಕ್ಕೆ ನಾನು ಮಣಿಯದೇ ಹೋದಾಗ ಆಕೆ, ಆಕೆಯ ಸಂಬಂಧಿಕರು ನನ್ನ ಹೆಸರು ದುರ್ಬಳಕೆ ಮಾಡಿಕೊಂಡು ಅಪಪ್ರಚಾರ ನಡೆಸಿದ್ದಾರೆ’ ಎಂಬುದು ರಾಮದಾಸ್ ದೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.