ADVERTISEMENT

ಮಾವು ಬೆಳೆಗೆ ಟ್ಯಾಂಕರ್ ನೀರು ಪೂರೈಕೆ

ಬಿಸಿಲಿಗೆ ಉದುರುತ್ತಿವೆ ಕಾಯಿ: ಬೆಳೆಗಾರರ ಸಂಕಟ

ಆರ್.ಜಿತೇಂದ್ರ
Published 27 ಫೆಬ್ರುವರಿ 2019, 20:29 IST
Last Updated 27 ಫೆಬ್ರುವರಿ 2019, 20:29 IST
ರಾಮನಗರ ತಾಲ್ಲೂಕಿನ ಕೂನಮುದ್ದನಹಳ್ಳಿಯ ಮಾವಿನ ತೋಟಕ್ಕೆ ಬುಧವಾರ ಟ್ಯಾಂಕರ್ ಮೂಲಕ ನೀರು ಪೂರೈಸಲಾಯಿತು
ರಾಮನಗರ ತಾಲ್ಲೂಕಿನ ಕೂನಮುದ್ದನಹಳ್ಳಿಯ ಮಾವಿನ ತೋಟಕ್ಕೆ ಬುಧವಾರ ಟ್ಯಾಂಕರ್ ಮೂಲಕ ನೀರು ಪೂರೈಸಲಾಯಿತು   

ರಾಮನಗರ: ಜಿಲ್ಲೆಯಲ್ಲಿ ಬಿಸಿಲ ಝಳ ವಿಪರೀತವಾಗಿದ್ದು, ಮಾವು ಬೆಳೆ ರಕ್ಷಣೆಗೆ ರೈತರು ಟ್ಯಾಂಕರ್ ನೀರಿನ ಮೊರೆ ಹೋಗುತ್ತಿದ್ದಾರೆ.

ರಾಮನಗರವು ರಾಜ್ಯದಲ್ಲಿ ಮಾವು ಬೆಳೆಯುವ ಜಿಲ್ಲೆಗಳಲ್ಲಿ ಎರಡನೇ ಸ್ಥಾನದಲ್ಲಿ ಇದೆ. ಇಲ್ಲಿನ 23 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಈ ಹಣ್ಣನ್ನು ಬೆಳೆಯಲಾಗುತ್ತಿದೆ. ರಾಜ್ಯದಲ್ಲಿಯೇ ಮೊದಲು ಮಾರುಕಟ್ಟೆಗೆ ಬರುವುದು ರಾಮನಗರದ ಮಾವು. ಇದಕ್ಕೆ ಇಲ್ಲಿನ ಅಧಿಕ ಉಷ್ಣಾಂಶ ಕಾರಣ.

ಜಿಲ್ಲೆಯಲ್ಲಿ ಈ ವರ್ಷ ಮಳೆ ಕೈಕೊಟ್ಟಿದ್ದು, ಮಾವಿನ ತೋಟಗಳಿಗೆ ನೀರಿನ ಕೊರತೆ ಎದುರಾಗಿದೆ. ಸೇಂದೂರ, ರಸಪುರಿ ಕಾಯಿಗಳು ಬಲಿಯುತ್ತಿದ್ದು, ಮಾರುಕಟ್ಟೆಗೆ ಬರಲಾರಂಭಿಸಿವೆ. ಬದಾಮಿ ಮರಗಳಲ್ಲಿ ಇನ್ನೂ ಮಿಡಿ ಇದೆ. ಬಿಸಿಲ ಝಳಕ್ಕೆ ಕಾಯಿಗಳು ಉದುರುತ್ತಿರುವುದು ರೈತರನ್ನು ಆತಂಕಕ್ಕೀಡು ಮಾಡಿದೆ.

ADVERTISEMENT

ಕೊಳವೆ ಬಾವಿ ಸಂಪರ್ಕ ಇರುವಲ್ಲಿಯೂ ಅಂತರ್ಜಲ ಕುಸಿಯುತ್ತಿದ್ದು, ನೀರಿನ ಲಭ್ಯತೆ ಕಡಿಮೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.