ADVERTISEMENT

’ಯಶೋ ಮಾರ್ಗ’ದಿಂದ ಟ್ಯಾಂಕರ್‌ ನೀರು

​ಪ್ರಜಾವಾಣಿ ವಾರ್ತೆ
Published 22 ಮೇ 2019, 20:01 IST
Last Updated 22 ಮೇ 2019, 20:01 IST
ಚಿತ್ರನಟ ಯಶ್‌ ನೇತೃತ್ವದ ಯಶೋಮಾರ್ಗ ಸಂಸ್ಥೆಯಿಂದ ರಾಯಚೂರಿನ ಬಿಜನಗೇರಾ ಗ್ರಾಮಕ್ಕೆ ಟ್ಯಾಂಕರ್‌ ಮೂಲಕ ಬುಧವಾರದಿಂದ ಉಚಿತವಾಗಿ ನೀರು ಪೂರೈಕೆ ಆರಂಭಿಸಲಾಗಿದೆ
ಚಿತ್ರನಟ ಯಶ್‌ ನೇತೃತ್ವದ ಯಶೋಮಾರ್ಗ ಸಂಸ್ಥೆಯಿಂದ ರಾಯಚೂರಿನ ಬಿಜನಗೇರಾ ಗ್ರಾಮಕ್ಕೆ ಟ್ಯಾಂಕರ್‌ ಮೂಲಕ ಬುಧವಾರದಿಂದ ಉಚಿತವಾಗಿ ನೀರು ಪೂರೈಕೆ ಆರಂಭಿಸಲಾಗಿದೆ   

ರಾಯಚೂರು: ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ನೀರಿನ ಕೊರತೆಯಿಂದ ಜನರು ಬವಣೆ ಅನುಭವಿಸುತ್ತಿರುವುದಕ್ಕೆ ಸ್ಪಂದಿಸಿರುವ ಚಿತ್ರನಟ ಯಶ್‌ ಅವರು ’ಯಶೋಮಾರ್ಗ’ ಸಂಸ್ಥೆಯ ಮೂಲಕ ರಾಯಚೂರು ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಬುಧವಾರದಿಂದ ನೀರು ಪೂರೈಕೆ ಆರಂಭಿಸಿದ್ದಾರೆ.

ರಾಯಚೂರು ತಾಲ್ಲೂಕಿನ ಬಿಜನಗೇರಾ, ಬೋಳಮಾನದೊಡ್ಡಿ, ಬಾಯಿದೊಡ್ಡಿ, ಗೌಶ್ ನಗರದಲ್ಲಿ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಹತ್ತಿರದಲ್ಲಿ ಲಭ್ಯವಿರುವ ಖಾಸಗಿ ಕೊಳವೆ ಬಾವಿಗಳಿಂದ ಟ್ಯಾಂಕರ್ ಗೆ ನೀರನ್ನು ತುಂಬಿಸಿಕೊಂಡು ಜನರಿಗೆ ಉಚಿತವಾಗಿ ಕೊಡಲಾಗುತ್ತಿದೆ.

ಮೊದಲ ಹಂತವಾಗಿ 10 ದಿನಗಳವರೆಗೆ ಪ್ರತಿಗ್ರಾಮಕ್ಕೆ ಮೂರು ಟ್ರಿಪ್ ನಂತೆ ನೀರು ಕೊಡಲು ಯಶ್ ಹಾಗೂ ಅವರ ಅಭಿಮಾನಿಗಳು ಮುಂದಾಗಿದ್ದಾರೆ.

ADVERTISEMENT

ಸದ್ಯ ಎರಡು ಟ್ಯಾಕ್ಟರ್ ಗಳ ಮೂಲಕ ನೀರು ಸರಬರಾಜು ಆರಂಭಿಸಿದ್ದಾರೆ. ಮುಂದಿನ ದಿನಗಳಲ್ಲಿ ಮಳೆ ಬಾರದೆ ಹೋದರೆ ಇನ್ನೂ ಹೆಚ್ಚು ಸಂಖ್ಯೆಯ ಟ್ಯಾಂಕರ್ ಬಳಸಿಕೊಂಡು ನೀರಿನ ಸಮಸ್ಯೆಯಿರುವ ಗ್ರಾಮಗಳಿಗೆ ನೀರಿನ ಸೌಲಭ್ಯ ಕಲ್ಪಿಸಲು ಯೋಜಿಸಿದ್ದಾರೆ.

ಯಶೋಮಾರ್ಗದಿಂದ ನೀರು ಪೂರೈಸುತ್ತಿರುವುದಕ್ಕೆ ಗ್ರಾಮೀಣ ಭಾಗದ ಜನರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.