ADVERTISEMENT

ವರ್ಗಾವಣೆ: ಮತ್ತೆ ಪರಿಷ್ಕೃತ ವೇಳಾಪಟ್ಟಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2019, 19:36 IST
Last Updated 19 ಸೆಪ್ಟೆಂಬರ್ 2019, 19:36 IST

ಬೆಂಗಳೂರು: ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ವೃಂದದ ಅಂತರ ಘಟಕ ವರ್ಗಾವಣಾ ಕೌನ್ಸೆಲಿಂಗ್‌ಗೆ ಗುರುವಾರ ಪುನರ್ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದೆ.

‘ತಾಂತ್ರಿಕ ಅಡಚಣೆಯಿಂದ ನಿಗದಿತ ವೇಳಾಪಟ್ಟಿಯಂತೆ ಕೌನ್ಸೆಲಿಂಗ್‌ ಕ್ರಮ ನಡೆಸಲಾಗುತ್ತಿಲ್ಲ. ಹೊಸ ವೇಳಾಪಟ್ಟಿಯಂತೆ ಶಿಕ್ಷಕರು ಕೌನ್ಸೆಲಿಂಗ್‌ಗೆ ಹಾಜರಾಗಬೇಕು. ಅನಿವಾರ್ಯ ಕಾರಣಗಳಿಂದ ಕ್ರಮಸಂಖ್ಯೆಯಂತೆ ಕೌನ್ಸೆಲಿಂಗ್‌ ನಡೆಯದಿದ್ದರೆ ಬದಲಾದ ದಿನಾಂಕವನ್ನು ತಕ್ಷಣ ಪ್ರಕಟಿಸಲಾಗುವುದು’ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆಯ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

ಇದೇ 20ರಂದು 1,001ರಿಂದ 1,250 ಕ್ರಮಸಂಖ್ಯೆವರೆಗಿನ (ನಾಲ್ಕೂ ವಿಭಾಗಗಳು ಸೇರಿ) ಶಿಕ್ಷಕರು ಹಾಗೂ 21ರಂದು 1,251ರಿಂದ 1,500 ಕ್ರಮಸಂಖ್ಯೆವರೆಗಿನ ಶಿಕ್ಷಕರು ಕೌನ್ಸೆಲಿಂಗ್‌ಗೆ ಹಾಜರಾಗಬೇಕು. 11,340 ಕ್ರಮಸಂಖ್ಯೆಯವರೆಗೆ ಶಿಕ್ಷಕರಿಗೆಕೌನ್ಸೆಲಿಂಗ್‌ ನಡೆಯಲಿದ್ದು, ಉಳಿದವರ ಕೌನ್ಸೆಲಿಂಗ್‌ ದಿನಾಂಕವನ್ನು ಬಳಿಕ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.