ADVERTISEMENT

ದೇಶಕ್ಕೆ ಪರ್ಯಾಯ ಪಕ್ಷವೇ ಇಲ್ಲ: ಸಚಿವ ಶಿವರಾಮ್ ಹೆಬ್ಬಾರ 

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2020, 11:00 IST
Last Updated 26 ಆಗಸ್ಟ್ 2020, 11:00 IST
ಸಚಿವ ಶಿವರಾಮ್ ಹೆಬ್ಬಾರ 
ಸಚಿವ ಶಿವರಾಮ್ ಹೆಬ್ಬಾರ    

ಗದಗ: ‘ಪಕ್ಷ ಮೊದಲು; ನಂತರ ಸರ್ಕಾರ. ಪಕ್ಷವನ್ನು ಗಟ್ಟಿ ಮಾಡಿದಾಗಲಷ್ಟೇ ಸರ್ಕಾರ ಮತ್ತಷ್ಟು ವರ್ಷಗಳ ಕಾಲ ಆಡಳಿತ ನೀಡಲು ಸಾಧ್ಯ’ ಎಂದು ಸಚಿವ ಶಿವರಾಮ್ ಹೆಬ್ಬಾರ ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರದ ಮೇಲೆ ಹಿರಿಯ ಮುಖಂಡ ಬಿ.ಎಲ್‌.ಸಂತೋಷ್‌ ಅವರ ‘ಹಿಡಿತ’ ಹೆಚ್ಚಾಗಿದೆ ಎಂಬ ಪ್ರಶ್ನೆಗೆ ಬುಧವಾರ ಗದುಗಿನಲ್ಲಿ ಪ್ರತಿಕ್ರಿಯಿಸಿದ ಅವರು, ‘ಬಿ.ಎಲ್‌.ಸಂತೋಷ್‌ ರಾಷ್ಟ್ರ ನಾಯಕರು. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಹಾಗೂ ಸರ್ಕಾರ ಈ ಮೂವರು ಕೂಡ ಜತೆಜತೆಯಾಗಿ ಹೋಗಬೇಕು. ಸರ್ಕಾರ ಮತ್ತು ಪಕ್ಷ ಜತೆಯಾಗಿದ್ದಾಗ ಮಾತ್ರ ಮುಂದಿನ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯ’ ಎಂದು ಹೇಳಿದರು.

‘ಈ ನಿಟ್ಟಿನಲ್ಲಿ ಬಿ.ಎಲ್‌.ಸಂತೋಷ್‌ ಅವರು ಸರ್ಕಾರಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸಲಹೆ ತೆಗೆದುಕೊಳ್ಳುತ್ತಾರೆ. ಇದು ‘ಕಂಟ್ರೋಲ್‌’ ಅಂತ ಅನ್ನಿಸಿಕೊಳ್ಳುವುದಿಲ್ಲ’ ಎಂದು ಸಮಜಾಯಿಷಿ ನೀಡಿದರು.

ADVERTISEMENT

ಮಾಜಿ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಬಿಜೆಪಿ ಸೇರ್ಪಡೆಗೊಂಡಿದ್ದರ ವಿಚಾರವಾಗಿ ಮಾತನಾಡಿದ ಅವರು, ‘ಯಾವಾಗಲೂ ಪಾರ್ಟಿ ಆಧಾರದ ಮೇಲೆಯೇ ಸರ್ಕಾರ ನಿಲ್ಲುತ್ತದೆ. ದೇಶಕ್ಕೆ ಪರ್ಯಾಯ ಪಕ್ಷ ಇಲ್ಲ. ಕೇಂದ್ರದಲ್ಲಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಗಟ್ಟಿಯಾದ ಹೆಜ್ಜೆಗಳನ್ನು ಇಟ್ಟಿದೆ. ಹೀಗಾಗಿ ಎಲ್ಲರೂ ಬಿಜೆಪಿ ಸೇರುತ್ತಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.