ADVERTISEMENT

ಏಳು ಜನರನ್ನು ಸೇರಿಸಿಕೊಂಡರೂ ಈ ಸರ್ಕಾರ ಟೇಕ್ ಆಫ್ ಆಗೋಲ್ಲ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 8:38 IST
Last Updated 13 ಜನವರಿ 2021, 8:38 IST
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ    

ಮೈಸೂರು: ಸಂಪುಟ ವಿಸ್ತರಣೆಗೆ ಅವಕಾಶ ಕೊಟ್ಟಿರುವುದರಿಂದ ಇನ್ನೂ ಸ್ವಲ್ಪ ದಿವಸ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಮುಂದುವರೆಯಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನನಗಿದ್ದ ಮಾಹಿತಿ ಪ್ರಕಾರ ಬಿಜೆಪಿ ಹೈಕಮಾಂಡ್ ರಾಜೀನಾಮೆಗೆ ಸೂಚನೆ ಕೊಟ್ಟಿತ್ತು. ಈಗ ಬಜೆಟ್ ಮಂಡಿಸಲು ಅವಕಾಶ ಕೊಟ್ಟಿರಬಹುದು. ಸಿದ್ದರಾಮಯ್ಯ ಹೇಳಿಕೆ. ಸಂಪುಟ ವಿಚಾರದಲ್ಲಿ ಪ್ರಾದೇಶಿಕ ಅಸಮತೋಲನ‌ವಿದೆ. ಸಮತೋಲನದ ಬಗ್ಗೆ ಬಿಜೆಪಿಯವ್ರಿಗೆ ನಂಬಿಕೆನೇ ಇಲ್ವಲ್ಲ ಎಂದು ಟೀಕಿಸಿದ್ದಾರೆ.

ಬಿಜೆಪಿಯವರು ಯಥಾಸ್ಥಿತಿವಾದಿಗಳು. ಅವರಿಗೆ ಸಮಾನತೆ ಬೇಕಿಲ್ಲ. ಅವರು ಬದಲಾವಣೆ ಬಯಸುವವರಲ್ಲ.
ಸಂವಿಧಾನ ವಿರೋಧಿಗಳು. ಅವರಲ್ಲಿ ಸಾಮಾಜಿಕ ನ್ಯಾಯ ಎಲ್ಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ಸರ್ಕಾರ ಟೇಕ್ ಆಫ್ ಆಗೋಲ್ಲ: ಏಳು ಜನರನ್ನು ಸೇರಿಸಿಕೊಂಡರೂ ಈ ಸರ್ಕಾರ ಟೇಕ್ ಆಫ್ ಆಗೋಲ್ಲ. ಸಚಿವ ಸಂಪುಟ ಭರ್ತಿಯಾದ ತಕ್ಷಣ ಈ ಸರ್ಕಾರ ಪರಿಪೂರ್ಣ ಆಗೋಲ್ಲ ಎಂದು ಸಂಪುಟ ವಿಸ್ತರಣೆ ಕುರಿತು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಸರ್ಕಾರ ಈಗಲೇ ಅಧೋಗತಿಗೆ ಹೋಗಿದೆ. ಸಂಪುಟ ವಿಸ್ತರಣೆಯ ಅಸಮಾಧಾನದಿಂದ ಮತ್ತಷ್ಟು ಅಧೋಗತಿಗೆ ಹೋಗಲಿದೆ ಎಂದಿದ್ದಾರೆ.

ಇದೇವೇಳೆ, ಕೃಷಿ ಮಸೂದೆಗಳ ತಿದ್ದುಪಡಿಗೆ ಸುಪ್ರಿಂ ತಡೆಯಾಜ್ಞೆ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಜನ ವಿರೋಧಿ ಕಾನೂನುಗಳು ಅಭಿವೃದ್ಧಿಗೆ ಮಾರಕ ಎಂಬುದು ಇದರಿಂದ ಗೊತ್ತಾಗಿದೆ. ಕೂಡಲೇ ಪ್ರಧಾನಿ ಮೋದಿ ದೇಶದ ಜನರ ಕ್ಷಮೆಯಾಚಿಸಬೇಕು. ಕೂಡಲೇ ಕಾನೂನುಗಳನ್ನ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.