ADVERTISEMENT

ಇನ್ಫೊಸಿಸ್‌ ಜತೆ ಒಪ್ಪಂದ: 12,300 ಕೋರ್ಸ್‌ಗಳು ಉಚಿತ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 21:41 IST
Last Updated 6 ಸೆಪ್ಟೆಂಬರ್ 2022, 21:41 IST
ಬೆಂಗಳೂರಿನಲ್ಲಿ ಮಂಗಳವಾರ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಇನ್ಫೊಸಿಸ್‌ ಉಚಿತ ಕೋರ್ಸ್‌ಗಳ ಕಲಿಕೆಯ  ಒಡಂಬಡಿಕೆ ಸಹಿ ಹಾಕಿದವು. ಸಚಿವ ಸಿ.ಎನ್‌.ಅಶ್ವತ್ಥನಾರಾಯಣ, ಇನ್ಫೊಸಿಸ್‌ ಶಿಕ್ಷಣ ಮತ್ತು ತರಬೇತಿ ವಿಭಾಗದ ಮುಖ್ಯಸ್ಥ ತಿರುಮಲ ಆರೋಹಿ, ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ, ಉಪಾಧ್ಯಕ್ಷ ಪ್ರೊ.ಬಿ.ತಿಮ್ಮೇಗೌಡ ಇದ್ದಾರೆ. 
ಬೆಂಗಳೂರಿನಲ್ಲಿ ಮಂಗಳವಾರ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಇನ್ಫೊಸಿಸ್‌ ಉಚಿತ ಕೋರ್ಸ್‌ಗಳ ಕಲಿಕೆಯ  ಒಡಂಬಡಿಕೆ ಸಹಿ ಹಾಕಿದವು. ಸಚಿವ ಸಿ.ಎನ್‌.ಅಶ್ವತ್ಥನಾರಾಯಣ, ಇನ್ಫೊಸಿಸ್‌ ಶಿಕ್ಷಣ ಮತ್ತು ತರಬೇತಿ ವಿಭಾಗದ ಮುಖ್ಯಸ್ಥ ತಿರುಮಲ ಆರೋಹಿ, ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ, ಉಪಾಧ್ಯಕ್ಷ ಪ್ರೊ.ಬಿ.ತಿಮ್ಮೇಗೌಡ ಇದ್ದಾರೆ.    

ಬೆಂಗಳೂರು: ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯು ಇನ್ಫೊಸಿಸ್‌ ಜತೆ ಮಂಗಳವಾರ ಒಡಂಬಡಿಕೆ ಮಾಡಿ ಕೊಂಡಿದ್ದು, 6ನೇ ತರಗತಿಯಿಂದ ಸ್ನಾತ ಕೋತ್ತರದವರೆಗಿನ ವಿದ್ಯಾರ್ಥಿಗಳಿಗೆ 12,300 ಕೋರ್ಸ್‌ಗಳು ಆನ್‌ಲೈನ್‌ನಲ್ಲಿ ಉಚಿತವಾಗಿ ಲಭ್ಯವಾಗಲಿವೆ.

ಈ ಕೋರ್ಸ್‌ಗಳುಬಾಲ್ಯದಿಂದಲೇ ವಿದ್ಯಾರ್ಥಿಗಳನ್ನು ಜೀವನೋಪಾಯ ಹಾಗೂ ಬದುಕಿಗೆ ಸಜ್ಜುಗೊಳಿಸಲು ಸಹ ಕಾರಿಯಾಗಿವೆ. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ರಾಜ್ಯ ಸರ್ಕಾರದ ಇತರೆ ವಿಶ್ವವಿದ್ಯಾಲಯಗಳ ಮುಖ್ಯಸ್ಥರು, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು.

ಆಧುನಿಕ ತಂತ್ರಜ್ಞಾನದ ನೆರವಿನಿಂದ ಇನ್ಫೊಸಿಸ್‌ ಸಿದ್ಧಪಡಿಸಿದ ಸ್ಪ್ರಿಂಗ್‌ಬೋರ್ಡ್ (https://infyspringboard.onwingspan.com) ಮೂಲಕ ಕೋರ್ಸ್‌ಗಳನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ADVERTISEMENT

ಇನ್ಫೊಸಿಸ್‌ ಸಂಸ್ಥೆಯ ಶಿಕ್ಷಣ ಮತ್ತು ತರಬೇತಿ ವಿಭಾಗದ ಮುಖ್ಯಸ್ಥ ತಿರುಮಲ ಆರೋಹಿ, 10ರಿಂದ 22 ವರ್ಷದ ವಿದ್ಯಾರ್ಥಿಗಳತ್ತ ಗಮನ ಕೇಂದ್ರೀಕರಿಸಿದ್ದೇವೆ. ಇದು ಭಾರತೀಯ ಭಾಷೆಗಳಲ್ಲೂ ಲಭ್ಯವಿದೆ. 23 ಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂದರು.

ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ
ಗೋಪಾಲಕೃಷ್ಣ ಜೋಶಿ, ಉಪಾಧ್ಯಕ್ಷ ಪ್ರೊ.ಬಿ.ತಿಮ್ಮೇಗೌಡ, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್‌, ಇನ್ಫೊಸಿಸ್‌ ಕಾರ್ಪೊರೇಟ್‌ ವ್ಯವಹಾರಗಳ ಮುಖ್ಯಸ್ಥ ಸಂತೋಷ ಅನಂತಪುರ, ಸ್ಪ್ರಿಂಗ್‌ಬೋರ್ಡ್ ವಿಭಾಗದ ಮುಖ್ಯಸ್ಥ ವಿಕ್ಟರ್‌ ಸುಂದರ ರಾಜ್ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.