ADVERTISEMENT

ಚಾಮರಾಜಪೇಟೆ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2018, 8:04 IST
Last Updated 13 ನವೆಂಬರ್ 2018, 8:04 IST
ರಾಜ್ಯ ಬಿಜೆಪಿ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ಸಿದ್ಧತೆ
ರಾಜ್ಯ ಬಿಜೆಪಿ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ಸಿದ್ಧತೆ   

ಬೆಂಗಳೂರು: ಕೇಂದ್ರ ಸಚಿವಅನಂತಕುಮಾರ್ ಅವರ ಪಾರ್ಥಿವ ಶರೀರವನ್ನು ಬಸವನಗುಡಿಯ ಅವರ ನಿವಾಸ ‘ಸುಮೇರು’ವಿನಿಂದ ಮಲ್ಲೇಶ್ವರದ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಬೆಳಿಗ್ಗೆ ರಕ್ಷಣಾ ಇಲಾಖೆ ವಾಹನದಲ್ಲಿ ಕೊಂಡೊಯ್ಯಲಾಗುವುದು. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪಿಯೂಶ್ ಗೋಯಲ್ ಸೇರಿದಂತೆ ಹಲವು ಗಣ್ಯರು ಇಂದು ಅಂತಿಮ ದರ್ಶನ ಪಡೆಯಲಿದ್ದಾರೆ.

ಬಸವನಗುಡಿಯಿಂದ ಮಲ್ಲೇಶ್ವರದವರೆಗಿನ ಸುಮಾರು 9.5 ಕಿ.ಮೀ. ಮಾರ್ಗದಲ್ಲಿ ಭಾವಪೂರ್ಣ ಮೆರವಣಿಗೆ ನಡೆಯಲಿದೆ. ಮಾರ್ಗ ನಿರ್ವಹಣೆಗೆ ಸುಮಾರು250 ಟ್ರಾಫಿಕ್ ಪೊಲೀಸರನ್ನು ನಿಯೋಜಿಸಲಾಗಿದೆ.

ಸಾರ್ವಜನಿಕದರ್ಶನ:‘ಬೆಳಿಗ್ಗೆ 8 ಗಂಟೆಗೆಬಿಜೆಪಿ ಕಚೇರಿಗೆ‌ ಶರೀರವನ್ನು ತರಲಾಗುವುದು.10 ಗಂಟೆಯವರೆಗೆದರ್ಶನಕ್ಕೆ ಅವಕಾಶ ನೀಡಲಾಗುವುದು.12 ಗಂಟೆಗೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ‌ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.ಮಧ್ಯಾಹ್ನ 1 ಗಂಟೆಗೆ ಚಾಮರಾಜಪೇಟೆ ಹಿಂದೂ ರುದ್ರಭೂಮಿಯಲ್ಲಿ ಸರ್ಕಾರಿ ಗೌರವಗಳೊಂದಿಗೆಅಂತ್ಯಸಂಸ್ಕಾರ ನೆರವೇರಿಸಲಾಗುವುದು’ ಎಂದು ಆರ್.ಅಶೋಕ್ ಸೋಮವಾರ ಮಾಹಿತಿ ನೀಡಿದ್ದರು.

ADVERTISEMENT

ರೂಟ್ ಮ್ಯಾಪ್: ಅನಂತಕುಮಾರ್ ಅವರ ಪಾರ್ಥಿವ ಶರೀರ ಇರುವ ರಕ್ಷಣಾ ಇಲಾಖೆಯ ತೆರೆದ ವಾಹನವುಎಸ್‌.ಪಿ.ಸಮಾಜ ರಸ್ತೆ, ಲಾಲ್‌ಬಾಗ್ ಪಶ್ಚಿಮ ದ್ವಾರ,ಎನ್‌.ಆರ್.ಸ್ಕ್ವೇರ್,ಆರ್‌.ವಿ.ರೋಡ್, ಮಿನರ್ವ ಸರ್ಕಲ್,ಮೈಸೂರು ಬ್ಯಾಂಕ್ಬಲ ತಿರುವು, ಮಹಾರಾಣಿ ಜಂಕ್ಷನ್, ಪಿ.ಜಿ.ಹಳ್ಳಿ ಜಂಕ್ಷನ್, ಕಾವೇರಿ ಜಂಕ್ಷನ್, ಭಾಷ್ಯಂ ಸರ್ಕಲ್, ಸರ್ಕಲ್ ಮಾರಮ್ಮ ರಸ್ತೆ, ಮೆಗ್ರಾತ್ ರಸ್ತೆ, ಸಂಪಿಗೆ ರಸ್ತೆ ಮಾರ್ಗವಾಗಿ ಮಲ್ಲೇಶ್ವರದಲ್ಲಿರ ಬಿಜೆಪಿ ರಾಜ್ಯ ಕಚೇರಿ ‘ಜಗನ್ನಾಥ ಭವನ’ ತಲುಪಲಿದೆ.

ಬಿಜೆಪಿ ಕಚೇರಿಯಿಂದ, ಕಾಡುಮಲ್ಲೇಶ್ವರ ದೇಗುಲ, ಸಂಪಿಗೆ ರಸ್ತೆ, ಸ್ಯಾಂಕಿ ಟ್ಯಾಂಕಿ ರಸ್ತೆ, ಭಾಷ್ಯಂ ಸರ್ಕಲ್, ಕಾವೇರಿ ಜಂಕ್ಷನ್, ಪಿ.ಜಿ.ಹಳ್ಳಿ ಜಂಕ್ಷನ್, ಬಿ ನಾಟ್‌ ಟು ಜಂಕ್ಷನ್, ಓಲ್ಡ್ ಹೈಗ್ರೌಂಡ್ ಪೊಲೀಸ್ ಠಾಣೆ, ಮಹಾರಾಣಿ ಕಾಲೇಜು ರಸ್ತೆ, ಕೆ.ಆರ್.ಸರ್ಕಲ್, ನೃಪತುಂಗ ರಸ್ತೆ, ಪೊಲೀಸ್ ಕಾರ್ನರ್, ಕಾರ್ಪೊರೇಷನ್ ಸರ್ಕಲ್, ಎನ್.ಆರ್.ಸ್ಕ್ವೇರ್, ದೇವನಾಗ ಜಂಕ್ಷನ್, ಪೂರ್ಣಿಮಾ ಜಂಕ್ಷನ್, ಊರ್ವಶಿ ಜಂಕ್ಷನ್, ವಾಣಿ ವಿಲಾಸ ರಸ್ತೆ, ಪಂಪ ಮಹಾಕವಿ ರಸ್ತೆ ಮಾರ್ಗವಾಗಿನ್ಯಾಷನಲ್ ಕಾಲೇಜು ಮೈದಾನ ತಲುಪಲಿದೆ.

ಸ್ಮಾರ್ತ ಸಂಪ್ರದಾಯ:ಋಗ್ವೇದ ಆಶ್ವಲಾಯನ ಸ್ಮಾರ್ತ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳು ನಡೆಯಲಿವೆ. ಅನಂತಕುಮಾರ್ ಅವರಿಗೆ ಗಂಡುಮಕ್ಕಳಿಲ್ಲದ ಕಾರಣಸೋದರ ನಂದಕುಮಾರ್ ಅಂತಿಮ ವಿಧಿವಿಧಾನಗಳನ್ನು ಪುರೋಹಿತ ಶ್ರೀನಾಥ್ ಮಾರ್ಗದರ್ಶನದಲ್ಲಿನೆರವೇರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.