ADVERTISEMENT

ಎರಡು ಮನೆಗಳನ್ನು ಆವರಿಸಿದ ಗುಡ್ಡದ ನೀರು

ಕುಮಟಾ ತಾಲ್ಲೂಕಿನ ತಂಡ್ರಕುಳಿ: ಅಪಾಯ ಅರಿತು ಮನೆ ಬಿಟ್ಟು ಓಡಿ ಪಾರಾದ ಮನೆಯವರು

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 15:50 IST
Last Updated 11 ಜೂನ್ 2019, 15:50 IST
ಕುಮಟಾ ತಾಲ್ಲೂಕಿನ ತಂಡ್ರಕುಳಿಯಲ್ಲಿ ಗುಡ್ಡದಿಂದ ರಾಷ್ಟ್ರೀಯ ಹೆದ್ದಾರಿಗೆ ಮಳೆ ನೀರು ಹರಿಯುತ್ತಿರುವುದು
ಕುಮಟಾ ತಾಲ್ಲೂಕಿನ ತಂಡ್ರಕುಳಿಯಲ್ಲಿ ಗುಡ್ಡದಿಂದ ರಾಷ್ಟ್ರೀಯ ಹೆದ್ದಾರಿಗೆ ಮಳೆ ನೀರು ಹರಿಯುತ್ತಿರುವುದು   

ಕುಮಟಾ: ತಾಲ್ಲೂಕಿನ ದೀವಗಿ ಸಮೀಪದ ತಂಡ್ರಕುಳಿಯಲ್ಲಿ ಮಂಗಳವಾರ ಸುರಿದ ರಭಸದ ಮಳೆಗೆಗುಡ್ಡದ ಮೇಲಿನಿಂದ ಇಳಿದನೀರು ಎರಡು ಮನೆಗಳನ್ನು ಸುತ್ತುವರಿದಿದೆ.ಅಪಾಯವನ್ನರಿತ ಮನೆಯವರು ಕೂಡಲೇ ಹೊರಗೋಡಿ ಬಚಾವಾದರು.

ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಗಾಗಿ ಇಲ್ಲಿ ಗುಡ್ಡವನ್ನು ಕತ್ತರಿಸಲಾಗಿತ್ತು. ಗುಡ್ಡದ ಮೇಲೆಸಂಗ್ರಹವಾದಮಳೆ ನೀರು ಒಂದೇ ಸಲ ರಭಸದಿಂದ ಕೆಳಗೆ ಹರಿಯಿತು. ಇದರ ಪರಿಣಾಮ, ಹೆದ್ದಾರಿಯ ಕೆಳಭಾಗದ ಎರಡು ಮನೆಗಳು ಜಲಾವೃತವಾದವು.

ಗಿರಿಜಾ ಗಣಪತಿ ಅಂಬಿಗ ಹಾಗೂ ಜ್ಯೋತಿ ನೀಲಪ್ಪ ಅಂಬಿಗ ಅವರ ಎರಡು ಕುಟುಂಬದವರು ಮಕ್ಕಳನ್ನೂಕರೆದುಕೊಂಡು ಮಳೆಯಲ್ಲೇ ಮನೆಯಿಂದ ಹೊರಗೋಡಿದರು. ಯಾರಿಗೂ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ಸ್ಥಳೀಯರಾದ ರಮೇಶ ಅಂಬಿಗ ತಿಳಿಸಿದ್ದಾರೆ.

ADVERTISEMENT

‘ಹೆದ್ದಾರಿ ನಿರ್ಮಾಣಕ್ಕೆ ಕತ್ತರಿಸಿದ ಗುಡ್ಡದ ಮೇಲ್ಭಾಗದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಗಟಾರದ ವ್ಯವಸ್ಥೆ ಇರಲಿಲ್ಲ. ಗುಡ್ಡದಲ್ಲಿ ಸಂಗ್ರಹವಾದ ಭಾರಿ ಪ್ರಮಾಣದ ಮಳೆ ನೀರಿಗೆ ಮಣ್ಣುಮೆತ್ತಗಾಯಿತು. ಇದರಿಂದ ನೀರುಎತ್ತರದಿಂದ ಕೆಳಗೆ ಧುಮುಕಿ ಹೆದ್ದಾರಿ ಹಾದು ಕೆಳ ಭಾಗದಲ್ಲಿರುವ ಜನವಸತಿ ಪ್ರದೇಶದತ್ತ ನುಗ್ಗಿತು. ನೀರಿನೊಂದಿಗೆಕಲ್ಲು, ಮಣ್ಣು ಕೊಚ್ಚಿಕೊಂಡು ಬಂದವು.ಹೆದ್ದಾರಿಯಲ್ಲಿ ನೀರು ಹರಿಯುವ ರಭಸಕ್ಕೆ ಕೆಲವು ನಿಮಿಷವಾಹನ ಸಂಚಾರವೂಸ್ಥಗಿತವಾಯಿತು’ ಎಂದು ಅವರು ತಿಳಿಸಿದರು.

ಗ್ರಾಮ ಪಂಚಾಯ್ತಿ ಸದಸ್ಯ ಆರ್.ಕೆ.ಅಂಬಿಗ ಮಾತನಾಡಿ, ‘ಈ ಹಿಂದೆ ಗುಡ್ಡದ ಮೇಲಿನ ನೀರು ಕೆಳಗೆ ಹರಿದು ಬಂದು ಅಘನಾಶಿನಿ ನದಿಗೆ ಹರಿದು ಹೋಗಲು ತಂಡ್ರಕುಳಿಯ ಶಾಲೆ ಬಳಿ ಒಂದು ಮೋರಿ ಇತ್ತು. ಹೆದ್ದಾರಿ ಕಾಮಗಾರಿ ಆರಂಭಿಸಿದ ಐ.ಆರ್.ಬಿ ಕಂಪನಿಯವರು ಅದನ್ನು ಮುಚ್ಚಿದ್ದಾರೆ. ನೀರು ಸಹಜವಾಗಿ ಹರಿದು ಹೋಗುವ ಹೆಚ್ಚಿನ ಕಡೆಗಳಲ್ಲಿ ಈ ರೀತಿಯಾಗಿದೆ’ ಎಂದುಅಸಮಾಧಾನ ವ್ಯಕ್ತಪಡಿಸಿದರು.

ಹೆದ್ದಾರಿ ನಿರ್ಮಾಣ ಮಾಡುವ ಐ.ಆರ್.ಬಿ ಕಂಪನಿಯ ಪ್ರತಿನಿಧಿಗಳು, ತಹಶೀಲ್ದಾರ್ ಮೇಘರಾಜ ನಾಯ್ಕ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು.

ಇತ್ತೀಚೆಗಷ್ಟೇ ಪ್ರಕೃತಿ ವಿಕೋಪದ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದ್ದ ಶಾಸಕ ದಿನಕರ ಶೆಟ್ಟಿ, ತಂಡ್ರಕುಳಿಯಲ್ಲಿ ಗುಡ್ಡ ಕುಸಿತವಾಗುವ ಅಪಾಯದ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ತುರ್ತು ಕ್ರಮದ ಬಗ್ಗೆ ಪತ್ರ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.