ADVERTISEMENT

ರಾಜ್ಯಕ್ಕೆ 4ನೇ ಸ್ಥಾನ: ಕಾರ್ಪೊರೇಟ್‌ ಲಾಯರ್‌ ರಿತಿಕಾ ಗುರಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 15:38 IST
Last Updated 14 ಜುಲೈ 2020, 15:38 IST
ಬಿ.ರಿತಿಕಾ ಕಾಮತ್
ಬಿ.ರಿತಿಕಾ ಕಾಮತ್   

ಕಾರ್ಕಳ: ಕುಕ್ಕುಂದೂರು ಗಣಿತ ನಗರದ ಜ್ಞಾನ ಸುಧಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಬಿ.ರಿತಿಕಾ ಕಾಮತ್ ದ್ವಿತೀಯ ಪಿಯು ವಾಣಿಜ್ಯ ವಿಭಾಗದಲ್ಲಿ 594 ಅಂಕ ಗಳಿಸಿ ಉಡುಪಿ ಜಿಲ್ಲೆಗೆ ಮೊದಲ ಸ್ಥಾನ, ರಾಜ್ಯಕ್ಕೆ 4ನೇ ಸ್ಥಾನ ಪಡೆದಿದ್ದಾರೆ.

ಓದಿನಲ್ಲಿ ಸದಾ ಮುಂದಿರುತ್ತಿದ್ದ ಈಕೆ ಕಾಲೇಜಿನ ಎಲ್ಲ ಚಟುವಟಿಕೆಗಳಲ್ಲೂ ಮುಂಚೂಣಿಯಲ್ಲಿದ್ದವಳು. ‘ನಾನು ದಿನವಿಡೀ 7–8 ಗಂಟೆ ಓದುವ ಬದಲಾಗಿ ಕೇವಲ 3–4 ಗಂಟೆ ಮಾತ್ರ ಓದುತ್ತಿದ್ದೆ. ಓದುವ ಸಮಯದಲ್ಲಿ ಓದು, ಉಳಿದ ಸಮಯದಲ್ಲಿ ಇತರ ಎಲ್ಲ ಚಟುವಟಿಕೆಗಳಲ್ಲಿ ಅಂದರೆ, ಭಾಷಣ, ಚರ್ಚೆ, ಸಂಗೀತ, ಅಭಿನಯ, ಸಾಮಾಜ ಸೇವಾ ಕಾರ್ಯಗಳೆಂದರೆ ನನಗೆ ಇಷ್ಟ. ಓದಿಗೆ ಮನೆಯವರ ಸಹಕಾರ, ಕಾಲೇಜಿನ ಸಿಬ್ಬಂದಿಯ ಮಾರ್ಗದರ್ಶನ ಕಾರಣ ’ ಎಂದು ತಮ್ಮ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದರು ರಿತಿಕಾ.

‘ಮುಂದೆ ಸಿಎ, ಎಂ.ಕಾಂ, ಎಂ.ಬಿ.ಎ, ಸಿಎಸ್ ಮಾಡುವ ಅವಕಾಶಗಳಿದೆ, ಆದರೆ ನಾನು ಕಾನೂನು ಪದವಿ ಪಡೆಯುವ ಇಚ್ಛೆ ಹೊಂದಿದ್ದೇನೆ. ನಾನು ಕಾರ್ಪೋರೇಟ್ ಲಾಯರ್ ಆಗಬೇಕು’ ಎನ್ನುತ್ತಾರೆ. ಮಗಳ ಇಚ್ಛೆಗೆ ತಂದೆ ದಿನಸಿ ಅಂಗಡಿಯ ಮಾಲೀಕರಾದ ಬಿ.ಸುಧೀರ್ ಕಾಮತ್ ಹಾಗೂ ತಾಯಿ ಗೃಹಿಣಿ ಗೀತಾ ಕಾಮತ್ ಅವರ ಸಂಪೂರ್ಣ ಬೆಂಬಲವಿದೆ. ದಂಪತಿ ಮಗಳ ಸಾಧನೆಗೆ ಅಭಿಮಾನ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.