ADVERTISEMENT

ಪರಿಶಿಷ್ಟರಿಗೆ ವೇದ ಗಣಿತ: ಆದೇಶ ವಾಪಸ್‌

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2022, 18:52 IST
Last Updated 13 ಅಕ್ಟೋಬರ್ 2022, 18:52 IST

ಬೆಂಗಳೂರು: ವೇದ ಗಣಿತ ಅಧ್ಯಯನಕ್ಕೆಅನುಸೂಚಿತ ಜಾತಿಗಳ ಉಪ ಹಂಚಿಕೆ (ಎಸ್‌ಸಿಎಸ್‌ಪಿ), ಬುಡಕಟ್ಟು ಉಪ ಹಂಚಿಕೆ (ಟಿಎಸ್‌ಪಿ) ನಿಧಿಯನ್ನುಬಳಸಿಕೊಳ್ಳಲುನೀಡಿದ್ದ ಅನುಮತಿಯನ್ನುಗ್ರಾಮೀಣಾಭಿವೃದ್ಧಿ ಇಲಾಖೆ ಹಿಂಪಡೆದಿದೆ.

ಪರಿಶಿಷ್ಟ ಜಾತಿ, ಪಂಗಡದ 5ರಿಂದ 8ನೇ ತರಗತಿ ವಿದ್ಯಾರ್ಥಿಗಳು ಸಮವಸ್ತ್ರ ಸಹಿತ ವೇದ ಗಣಿತ ಕಲಿಕೆಗೆ ಹಾಜರಾಗಲು ಅನುಕೂಲವಾಗುವಂತೆಗ್ರಾಮ ಪಂಚಾಯಿತಿಗಳಲ್ಲಿನ ಎಸ್‌ಸಿಎಸ್‌ಪಿ,ಟಿಎಸ್‌ಪಿ ನಿಧಿ ಬಳಕೆಗೆ ಮಾಡಿಕೊಳ್ಳಲು ಗ್ರಾಮೀಣಾಭಿವೃದ್ಧಿ ಇಲಾಖೆಆದೇಶ ಹೊರಡಿಸಿತ್ತು.

ಇಲಾಖೆ ಆದೇಶ ಹೊರಡಿಸುವ ಮೊದಲು ಮುಖ್ಯಮಂತ್ರಿ ಅಧ್ಯಕ್ಷತೆಯ ಅನುಸೂಚಿತ ಜಾತಿಗಳು ಮತ್ತು ಪಂಗಡಗಳ ಅಭಿವೃದ್ಧಿ ಪರಿಷತ್‌ ಸಭೆಯಲ್ಲಿ ಅನುಮೋದನೆ ಪಡೆದುಕೊಂಡಿಲ್ಲ. ಹಾಗಾಗಿ, ವೇದ ಗಣಿತ ಯೋಜನೆಯ ಆದೇಶ ಹಿಂಪಡೆಯಬೇಕು. ಮುಂದಿನ ನೋಡೆಲ್‌ ಏಜೆನ್ಸಿ ಸಭೆಯಲ್ಲಿ ಚರ್ಚಿಸಿದ ನಂತರ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಲಹೆ ನೀಡಿತ್ತು. ಸಲಹೆಯನ್ನು ಪರಿಗಣಿಸಿದ ಇಲಾಖೆ ಆದೇಶ ಹಿಂಪಡೆದಿದೆ.

ADVERTISEMENT

‘ವೇದ ಗಣಿತದ ನೆಪದಲ್ಲಿ ಪರಿಶಿಷ್ಟರಿಗೆ ಮೀಸಲಾದ ನಿಧಿಯಲ್ಲಿ ₹70 ಕೋಟಿ ಬಳಕೆ ಮಾಡಿಕೊಳ್ಳಲು ಗ್ರಾಮೀಣಾಭಿವೃದ್ಧಿ ಇಲಾಖೆ ಮುಂದಾಗಿದೆ. ಇದು ಪರಿಶಿಷ್ಟರ ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ ಕಾಯ್ದೆಯ ಉಲ್ಲಂಘನೆ’ ಎಂದು ಡಾ.ಬಿ.ಆರ್.ಅಂಬೇಡ್ಕರ್‌ ಸಂವಿಧಾನ ಹಕ್ಕುಗಳ ಸಂರಕ್ಷಣಾ ಪರಿಷತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.