ADVERTISEMENT

ಸಂಗೀತದಲ್ಲಿ ಸಾಧನೆ: ಕನ್ಯಾಕುಮಾರಿ, ನೀಲಾ ರಾಂ ಗೋಪಾಲ್‌ಗೆ ರಾಷ್ಟ್ರೀಯ ಪ್ರಶಸ್ತಿ

ಧರ್ಮಸ್ಥಳದಲ್ಲಿ ‘ವೀಣೆಯ ಬೆಡಗು - ವೀಣೆ ಶೇಷಣ್ಣ ಸ್ಮಾರಕ ಸಂಗೀತೋತ್ಸವ’ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 19:00 IST
Last Updated 10 ಅಕ್ಟೋಬರ್ 2019, 19:00 IST
 ನೀಲಾ ರಾಂ ಗೋಪಾಲ್, ಎ. ಕನ್ಯಾಕುಮಾರಿ
ನೀಲಾ ರಾಂ ಗೋಪಾಲ್, ಎ. ಕನ್ಯಾಕುಮಾರಿ   

ಉಜಿರೆ: ಬೆಂಗಳೂರಿನ ಸ್ವರಮೂರ್ತಿ ವಿ.ಎನ್. ರಾವ್ ಸ್ಮಾರಕ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಆಶ್ರಯದಲ್ಲಿ ಕೊಡಮಾಡುವ ‘ವೀಣೆ ಶೇಷಣ್ಣ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ’ಗೆ ಪದ್ಮಶ್ರೀ ಎ. ಕನ್ಯಾಕುಮಾರಿ ಹಾಗೂ ‘ಸ್ವರಮೂರ್ತಿ ವಿ.ಎನ್. ರಾವ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ’ಗೆ ವಿದುಷಿ ನೀಲಾ ರಾಂ ಗೋಪಾಲ್ ಆಯ್ಕೆಯಾಗಿದ್ದಾರೆ.

ಧರ್ಮಸ್ಥಳದ ವಸಂತ ಮಹಲ್‌ನಲ್ಲಿ ಇದೇ 12 ರಂದುನಡೆಯಲಿರುವ ‘ವೀಣೆಯ ಬೆಡಗು - ವೀಣೆ ಶೇಷಣ್ಣ ಸ್ಮಾರಕ ಸಂಗೀತೋತ್ಸವ’ದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಪ್ರಶಸ್ತಿ ಪ್ರದಾನ ಮಾಡುವರು.

ತಲಾ ₹1 ಲಕ್ಷ ನಗದು ಪುರಸ್ಕಾರ ಹೊಂದಿದ ‘ವೀಣೆ ಶೇಷಣ್ಣ ಪ್ರಶಸ್ತಿ’ಯನ್ನು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹಾಗೂ ‘ಸ್ವರಮೂರ್ತಿ ವಿ.ಎನ್. ರಾವ್ ಪ್ರಶಸ್ತಿ’ಯನ್ನು ಬೆಂಗಳೂರಿನ ನ್ಯಾಷನಲ್‌ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಎ.ಎಚ್. ರಾಮರಾವ್ ಮತ್ತು ಸುಧಾ ರಾಮರಾವ್ ಪ್ರಾಯೋಜಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.