ADVERTISEMENT

ವೃಂದಾವನ ನಿರ್ಮಾಣದ ನೆನಪು

ಶ್ರೀವ್ಯಾಸರಾಜ

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 1:21 IST
Last Updated 23 ಜುಲೈ 2019, 1:21 IST
ಬಸವನಗುಡಿಯ ಸೋಸಲೆ ಶ್ರೀವ್ಯಾಸರಾಜಮಠದಲ್ಲಿ ಸೋಮವಾರ ಆಯೋಜಿಸಿದ್ದ ‘ನೆನಪು ಮಾಸುವ ಮುನ್ನ’ ಕಾರ್ಯಕ್ರಮದಲ್ಲಿ ವಿದ್ಯಾಶ್ರೀಶತೀರ್ಥ ಶ್ರೀಪಾದರು ಮಾತನಾಡಿದರು -ಪ್ರಜಾವಾಣಿ ಚಿತ್ರ
ಬಸವನಗುಡಿಯ ಸೋಸಲೆ ಶ್ರೀವ್ಯಾಸರಾಜಮಠದಲ್ಲಿ ಸೋಮವಾರ ಆಯೋಜಿಸಿದ್ದ ‘ನೆನಪು ಮಾಸುವ ಮುನ್ನ’ ಕಾರ್ಯಕ್ರಮದಲ್ಲಿ ವಿದ್ಯಾಶ್ರೀಶತೀರ್ಥ ಶ್ರೀಪಾದರು ಮಾತನಾಡಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸಮೀಪ ತುಂಗಭದ್ರಾ ನದಿಯ ನಡುಗಡ್ಡೆಯ ‘ನವ ವೃಂದಾವನ’ ಕ್ಷೇತ್ರದಲ್ಲಿನ ವ್ಯಾಸರಾಯರ ಮೂಲ ವೃಂದಾವನ ಪುನರ್ ನಿರ್ಮಾಣಕ್ಕೆ ಜನರು ನೀಡಿದ ನೈತಿಕ ಬೆಂಬಲವೇ ಕಾರಣವಾಯಿತು ಎಂದುಸೋಸಲೆ ಶ್ರೀವ್ಯಾಸರಾಜ ಮಠದ ವಿದ್ಯಾಶ್ರೀಶತೀರ್ಥ ಶ್ರೀಪಾದರು ಹೇಳಿದರು.

ನಗರದ ಸೋಸಲೆ ವ್ಯಾಸರಾಜ ಮಠದಲ್ಲಿ ಸೋಮವಾರ ನಡೆದ‘ನೆನಪು ಮಾಸುವ ಮುನ್ನ’ ಕಾರ್ಯಕ್ರಮ
ದಲ್ಲಿ ಮಾತನಾಡಿದ ಅವರು, ‘ವೃಂದಾವನ ಧ್ವಂಸವಾಗಿದ್ದು ನೋವಿನ ಸಂಗತಿ. ಅದನ್ನು ಮರು ನಿರ್ಮಾಣ ಮಾಡಲು ಸಹಕರಿಸಿದ ಎಲ್ಲರೂ ಪ್ರಶಂಸೆಗೆ ಅರ್ಹರು’ ಎಂದು ಅವರು ಹೇಳಿದರು.

ವೃಂದಾವನ ಮರು ನಿರ್ಮಾಣದ ಸಂದರ್ಭವನ್ನು ಹಲವರು ಎಳೆಎಳೆಯಾಗಿ ವಿವರಿಸಿದರು. ಈ ಕಾರ್ಯದಲ್ಲಿ ಪಾಲ್ಗೊಂಡಿದ್ದವರನ್ನು ಶ್ರೀಪಾದರು ಇದೇ ವೇಳೆ ಸನ್ಮಾನಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.