ADVERTISEMENT

ಬಾಲಕಿ ಪತ್ತೆಗೆ ನೆರವಾದ ವಾಟ್ಸ್ಆ್ಯಪ್

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 19:13 IST
Last Updated 19 ಮಾರ್ಚ್ 2019, 19:13 IST
ಶ್ವೇತಾ
ಶ್ವೇತಾ   

ಉಚ್ಚಂಗಿದುರ್ಗ: ಕಾಣೆಯಾಗಿದ್ದ ಬಾಲಕಿಯೊಬ್ಬಳ ಪತ್ತೆಗೆ ವಾಟ್ಸ್ಆ್ಯಪ್ ಸಂದೇಶ ನೆರವಾಗಿದೆ.

ಇಲ್ಲಿನ ಖಾಸಗಿ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದ ಶ್ವೇತಾ ಸೋಮವಾರ ಕಾಣೆಯಾಗಿದ್ದಳು.

ಬೆಳಿಗ್ಗೆ 7ಕ್ಕೆ ಪಾದಗಟ್ಟೆಯ ಬಳಿ ಆಟ ಆಡುತ್ತಾ ನಿಂತಿದ್ದ ಬಾಲಕಿ ಗೊತ್ತಾಗದೆ ದಾವಣಗೆರೆಗೆ ತೆರಳುವ ಬಸ್ ಹತ್ತಿದ್ದಳು. ಗಾಬರಿ
ಗೊಂಡ ಪೋಷಕರು ಗ್ರಾಮದ ಅಕ್ಕಪಕ್ಕದ ಮನೆ ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಿದರೂ ಸಿಕ್ಕಿರ
ಲಿಲ್ಲ. ಬಳಿಕ ಪಾಲಕರು ಮಗುವಿನ ಭಾವಚಿತ್ರದ ಸಮೇತ ವಾಟ್ಸ್ಆ್ಯಪ್‌ನಲ್ಲಿ ಸಂದೇಶ ಕಳುಹಿಸಿದ್ದರು.

ADVERTISEMENT

ಬಾಲಕಿ ದಾವಣಗೆರೆಯ ಹೊಸ ಬಸ್ ನಿಲ್ದಾಣದಲ್ಲಿ ಪತ್ತೆ ಆಗಿದ್ದಳು. ವಾಟ್ಸ್ಆ್ಯಪ್‌ನಲ್ಲಿ ಬಾಲಕಿಯ ಭಾವಚಿತ್ರ ನೋಡಿದ ವಕೀಲ ಗುಡಿಹಳ್ಳಿ ಹಾಲೇಶ ಮಗುವನ್ನು ಪೋಷಕರಿಗೆ ತಲುಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.