ADVERTISEMENT

ಜೆಡಿಎಸ್ ಜತೆ ಮೈತ್ರಿ, ವಿಲೀನಕ್ಕೆ ತಕರಾರಿಲ್ಲ: ಎಸ್.ಟಿ. ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2020, 12:34 IST
Last Updated 23 ಡಿಸೆಂಬರ್ 2020, 12:34 IST
   

ಬೆಂಗಳೂರು: ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವುದಕ್ಕೆ ಅಥವಾ ವಿಲೀನ ಮಾಡಿಒಳ್ಳುವುದಕ್ಕೆ ತಮ್ಮ‌ ತಕರಾರು ಇಲ್ಲ. ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧ ಎಂದು ಸಹಕಾರ ಸಚಿವ ಎಸ್.ಟಿ.‌ ಸೋಮಶೇಖರ್ ಹೇಳಿದರು.

ಜೆಡಿಎಸ್ ಪಕ್ಷದ ಜತೆ ಮೈತ್ರಿ ಅಥವಾ ವಿಲೀನ‌ ಕುರಿತ ಪ್ರಶ್ನೆಗೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಉತ್ತರಿಸಿದ ಅವರು, 'ನಾವು ಕಾಂಗ್ರೆಸ್ ಪಕ್ಷ ತೊರೆದು‌ ಬಿಜೆಪಿಗೆ ಬಂದಿದ್ದೇವೆ.‌ ಈಗ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು. ‌ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ' ಎಂದರು.

ತಮ್ಮ ಗುಂಪಿನಲ್ಲಿ ಯಾವುದೇ ಒಡಕು ಇಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈವರೆಗೂ ನುಡಿದಂತೆ ನಡೆದಿದ್ದಾರೆ. ಮುಂದೆಯೂ ಕಾಲಕ್ಕೆ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದರು.

ADVERTISEMENT

'ಹಲವು ಮಂದಿ‌ ನನ್ನನ್ನು ಜಲ್ಲಿ, ಮರಳಿನಂತೆ ಬಳಸಿಕೊಂಡಿದ್ದಾರೆ' ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸೋಮಶೇಖರ್, 'ಸಾವಿರಾರು ಜನರ ಬೆಂಬಲದಿಂದಲೇ ನಾವೆಲ್ಲ ಶಾಸಕರು, ಸಚಿವರೂ ಆಗುತ್ತೇವೆ.‌ ಜನರು ಬೆಂಬಲಿಸದಿದ್ದರೆ ಅವರು, ನಾವು ಯಾರೂ ನಾಯಕರಾಗಿ ಇರುವುದಿಲ್ಲ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.