ADVERTISEMENT

ಕಾಂಗ್ರೆಸ್‌ಗೂ ಮೊಘಲರಿಗೂ ಏನು ಸಂಬಂಧ?: ಸಿ.ಟಿ.ರವಿ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 31 ಮೇ 2022, 19:42 IST
Last Updated 31 ಮೇ 2022, 19:42 IST
ಸಿ.ಟಿ.ರವಿ
ಸಿ.ಟಿ.ರವಿ   

ಚಿಕ್ಕಮಗಳೂರು: ‘ಆರ್‌ಎಸ್‌ಎಸ್‌, ಬಿಜೆಪಿ ನಡುವೆ ವೈಚಾರಿಕ ಹಾಗೂ
ಸಾಂಸ್ಕೃತಿಕ ಸಂಬಂಧ ಇದೆ. ಆದರೆ, ಕಾಂಗ್ರೆಸ್‌ನವರಿಗೆ ಟಿಪ್ಪು ಸುಲ್ತಾನ್, ಮೊಘಲರ ಜೊತೆ ಏನು ಸಂಬಂಧ?’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರಶ್ನಿಸಿದರು.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಟಿಪ್ಪು ಸುಲ್ತಾನ್,ಮೊಘಲರನ್ನು ಟೀಕಿಸಿದರೆ ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ಏಕೆ ಎದೆ ಬಡಿದುಕೊಳ್ಳುತ್ತಾರೆ? ಟಿಪ್ಪು ಅತ್ಯಾಚಾರಿ, ಕನ್ನಡ ವಿರೋಧಿ ಎಂದರೆ ಕಾಂಗ್ರೆಸ್‌ಗೆ ಏಕೆ ಸಿಟ್ಟು’ ಎಂದರು.

‘ನಾಡಗೀತೆ, ರೈತ ಗೀತೆ ಹಾಡುವು
ದನ್ನು ಕಡ್ಡಾಯ ಮಾಡಿದ್ದೇ ಬಿಜೆಪಿ ಸರ್ಕಾರ. ಅಂತಹ ಸರ್ಕಾರ ಕುವೆಂಪು ವಿರುದ್ಧ ಹೋಗುತ್ತಾ?’ ಎಂದು ಪಠ್ಯ ಪುಸ್ತಕ ಪರಿಷ್ಕರಣೆ ಕುರಿತ ವಿವಾದದ ಬಗ್ಗೆ ಪ್ರತಿಕ್ರಿಯಿಸಿದರು.

ADVERTISEMENT

ರೈತ ಮುಖಂಡ ರಾಕೇಶ್‌ ಟಿಕಾಯತ್ ಮತ್ತು ಯದುವೀರ್‌ಸಿಂಗ್ ಅವರಿಗೆ ಮಸಿ ಬಳಿದಿರುವುದು ಸರಿಯಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.