ADVERTISEMENT

ಹಾಸನ: ನ್ಯಾಯಕ್ಕಾಗಿ ಮಾನಸಿಕ ಅಸ್ವಸ್ಥೆಯ ಅರೆಬೆತ್ತಲೆ ಪ್ರತಿಭಟನೆ

ನ್ಯಾಯ ಕೊಡಿಸುವಂತೆ ಕುಮಾರಸ್ವಾಮಿ ಬಳಿ ಮೊರೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2018, 9:33 IST
Last Updated 20 ನವೆಂಬರ್ 2018, 9:33 IST
   

ಹಾಸನ: ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ನಾಲ್ವರು ಪುರುಷರ ವಿರುದ್ದ ಆರೋಪ ಮಾಡುತ್ತಿರುವ ಮಾನಸಿಕ ಅಸ್ವಸ್ಥಮಹಿಳೆಯು ನ್ಯಾಯಕ್ಕಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ರಸ್ತೆಯಲ್ಲಿ ಅರೆಬೆತ್ತಲೆಹೋರಾಟ ಮಾಡಿದರು.

ಬಸ್ ವೈಪರ್ ಬಿಚ್ಚಿ ಮೂರು ಕೆಎಸ್‌ಆರ್‌ಟಿಸಿ ಬಸ್ ಗಾಜು ಪುಡಿ ಮಾಡಿದ ಮಹಿಳೆ, ಜನರತ್ತ ಕಲ್ಲು ಹಾಗೂ ತೆಂಗಿನ ಕಾಯಿ ತೂರಿ ಆಕ್ರೋಶ ವ್ಯಕ್ತಪಡಿಸಿದರು.

ಅರ್ಧ ಗಂಟೆಗೂ ಅಧಿಕಸಮಯಅರೆಬೆತ್ತಲೆಯಾಗಿ ನಿಂತು ಪ್ರತಿಭಟಿಸಿದಮಹಿಳೆ, ನ್ಯಾಯ ಸಿಕ್ಕಲ್ಲ ಎಂದು ಹೇಳುತ್ತಿದ್ದು, ಹಲವು ವರ್ಷಗಳಿಂದ ದೌರ್ಜನ್ಯ ಎಸಗುತ್ತಿರುವುದಾಗಿ, ನ್ಯಾಯ ಕೊಡಿಸುವಂತೆ ಸಿಎಂ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ADVERTISEMENT

ಮಹಿಳೆಯನ್ನು ಸಮಾಧಾನ ಮಾಡಲು ಪೊಲೀಸರು ಹರಸಾಹಸ ಪಟ್ಟಿದ್ದು, ನಂತರ ಮನವೊಲಿಸಿ ಆಟೊದಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.