ADVERTISEMENT

‘ಯುವಕರು ಏಕೆ ಹೃದಯಾಘಾತಕ್ಕೆ ಒಳಗಾಗುತ್ತಾರೆ’ ಕುರಿತು ವೆಬಿನಾರ್‌ ಇಂದು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 17:36 IST
Last Updated 28 ಸೆಪ್ಟೆಂಬರ್ 2021, 17:36 IST
   

ಬೆಂಗಳೂರು: ‘ವಿಶ್ವ ಹೃದಯ ದಿನದ ಅಂಗವಾಗಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’, ಮಣಿಪಾಲ್‌ ಆಸ್ಪತ್ರೆಯ ಸಹಯೋಗದಲ್ಲಿ ‘ಯುವಕರು ಏಕೆ ಹೃದಯಾಘಾತಕ್ಕೆ ಒಳಗಾಗುತ್ತಾರೆ’ ವಿಷಯದ ಕುರಿತು ವೆಬಿನಾರ್‌ ಹಮ್ಮಿಕೊಂಡಿದೆ.

ಇದೇ 29ರಂದು ಸಂಜೆ 5ರಿಂದ 6ರವರೆಗೆ ವೆಬಿನಾರ್‌ ನಿಗದಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಗೆ ಗುರಿಯಾಗುತ್ತಿರುವ ಯುವಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇದಕ್ಕೆ ಕಾರಣವೇನು ಎಂಬುದರ ಕುರಿತು ತಜ್ಞ ವೈದ್ಯರು ಸಂವಾದ ನಡೆಸಲಿದ್ದಾರೆ. ಹೃದಯ ಸಂಬಂಧಿ ಕಾಯಿಲೆಗಳಿಂದ ಪಾರಾಗಲು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತೂ ಸಲಹೆಗಳನ್ನು ನೀಡಲಿದ್ದಾರೆ.

ADVERTISEMENT

ಹೆಬ್ಬಾಳದಲ್ಲಿರುವ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ವೈದ್ಯ ಡಾ.ಎಸ್‌.ಸುನಿಲ್‌ ಕುಮಾರ್‌, ಯಶವಂತಪುರದ ಕೊಲಂಬಿಯಾ ಏಷ್ಯಾ ರೆಫರಲ್‌ ಆಸ್ಪತ್ರೆಯ ವೈದ್ಯ ಡಾ.ಕಾರ್ತಿಕ್‌ ವಾಸುದೇವನ್‌, ಮಿಲ್ಲರ್ಸ್‌ ರಸ್ತೆಯಲ್ಲಿರುವ ವಿಕ್ರಂ ಆಸ್ಪತ್ರೆಯ ವೈದ್ಯ ಡಾ.ಸುನಿಲ್‌ ದ್ವಿವೇದಿ ಅವರು ಸಂವಾದದಲ್ಲಿ ಮಾತನಾಡಲಿದ್ದಾರೆ.

ವೈಟ್‌ಫೀಲ್ಡ್‌ನಲ್ಲಿರುವ ಮಣಿಪಾಲ್‌ ಆಸ್ಪತ್ರೆಯ ವೈದ್ಯ ಡಾ.ಪ್ರದೀಪ್‌ ಹಾರನಹಳ್ಳಿ, ಲೈವ್‌ಆಲ್ಟ್‌ಲೈಫ್‌ನ ಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿವೇಕ್‌ ಸುಬ್ರಹ್ಮಣ್ಯಂ ಅವರೂ ಭಾಗವಹಿಸಲಿದ್ದಾರೆ.

ವೆಬಿನಾರ್‌ನಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರುhttps://bit.ly/3EP0Xnz ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.