ADVERTISEMENT

ಮೃಗಾಲಯದ ಪ್ರಾಣಿಗಳಿಗೆ ದನದ ಮಾಂಸ: ಕಾನೂನು ಸಡಿಲಿಸಲು ಕೋರಿದ ಮೃಗಾಲಯ ಪ್ರಾಧಿಕಾರ

ಮೃಗಾಲಯದ ಪ್ರಾಣಿಗಳಿಗೆ ದನದ ಮಾಂಸ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 19:40 IST
Last Updated 17 ಏಪ್ರಿಲ್ 2021, 19:40 IST
ಎಲ್‌.ಆರ್‌. ಮಹದೇವಸ್ವಾಮಿ
ಎಲ್‌.ಆರ್‌. ಮಹದೇವಸ್ವಾಮಿ   

ಹೊಸಪೇಟೆ (ವಿಜಯನಗರ): ‘ರಾಜ್ಯದ ಎಲ್ಲ ಮೃಗಾಲಯಗಳಲ್ಲಿ ಪ್ರಾಣಿಗಳಿಗೆ ಹಿಂದಿನಂತೆ ದನದ ಮಾಂಸ ಪೂರೈಸಲು ಚಿಂತನೆ ನಡೆದಿದೆ. ಇದಕ್ಕೆ ಪೂರಕವಾಗಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆ ಕಾಯ್ದೆ ಸಡಿಲಗೊಳಿಸಿ, ವಿನಾಯಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಶನಿವಾರ ತಿಳಿಸಿದರು.

ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ ಭೇಟಿ ನೀಡಿದ್ದ ಅವರು, ‘ಇಷ್ಟರಲ್ಲೇ ಮೃಗಾಲಯ ಪ್ರಾಧಿಕಾರದ ಸಭೆ ನಡೆಯಲಿದೆ. ಆ ಸಭೆಯಲ್ಲಿ ವಿಸ್ತೃತ
ವಾಗಿ ಚರ್ಚಿಸಿ ಮತ್ತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು‘ ಎಂದು ತಿಳಿಸಿದರು.

‘ಕೆಲವು ಕಡೆ ಪ್ರಾಣಿಗಳು ಕೋಳಿಮಾಂಸಕ್ಕೆ ಹೊಂದಿಕೊಂಡಿವೆ. ಕೆಲವೆಡೆ ಹೊಂದಿಕೊಳ್ಳುತ್ತಿವೆ. ಆದರೆ, ದನದ ಮಾಂಸವೇ ಅವುಗಳಿಗೆ ಅಚ್ಚುಮೆಚ್ಚು. 13 ವರ್ಷ ಮೀರಿದ ಹಸುಗಳನ್ನು ಮೃಗಾಲಯಗಳಿಗೆ ಕೊಡಬಹುದು. ಟೆಂಡರ್‌ ಕರೆದು, ದನದಮಾಂಸ ಪೂರೈಕೆಗೆ ವ್ಯವಸ್ಥೆ ಮಾಡಬಹುದು’ ಎಂದು ಹೇಳಿದರು.

ADVERTISEMENT

‘ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಯೋಜನೆಯಡಿ ರಾಜ್ಯದ ಎಲ್ಲ ಮೃಗಾಲಯಗಳ ನಿರ್ವಹಣೆಗೆ ಶೇ 0.5ರಷ್ಟು ಹಣ ಮೀಸಲಿಡುವಂತೆ ಕೋರಿ ಬೃಹತ್‌ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ಅವರಿಗೆ ಪತ್ರ ಬರೆದಿದ್ದೇವೆ. ಸದ್ಯದಲ್ಲಿಯೇ ಇದರ ಬಗ್ಗೆ ತೀರ್ಮಾನ ಹೊರಬೀಳಬಹುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.