ADVERTISEMENT

ಅಕ್ರಮ ರಫ್ತು: ಭಾರತೀಯರ ಬಂಧನ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2011, 19:30 IST
Last Updated 5 ಸೆಪ್ಟೆಂಬರ್ 2011, 19:30 IST

ಅಬುಜಾ, ನೈಜೀರಿಯಾ (ಪಿಟಿಐ):  ಸುಮಾರು 4,65,000 ಅಮೆರಿಕನ್ ಡಾಲರ್ ಮೌಲ್ಯದ ನಾಲ್ಕು ಪೆಟ್ಟಿಗೆ ಲೋಡ್‌ಗಳಷ್ಟು ತುಂಡು ಲೋಹಗಳನ್ನು ಅಕ್ರಮವಾಗಿ ರಫ್ತು ಮಾಡಲು ಯತ್ನಿಸಿದ ಆರೋಪದ ಮೇಲೆ 17 ಭಾರತೀಯರನ್ನು ಬಂಧಿಸಲಾಗಿದೆ.

ಇವರಲ್ಲಿ ವಿಕಾಸ್ ದಾಸ್, ನರೇಶ್ ಗುಪ್ತ, ಧರ್ಮಿನ್ ಭಟ್ ಹಾಗೂ ನಿಲೇಶ್ ಮೋದಿ ಎಂಬ ನಾಲ್ವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ದಾಸ್ ಅವರು ಎವರೆಸ್ಟ್ ಮೆಟಲ್ ನೈಜೀರಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ಇತರರು ನಿರ್ದೇಶಕರು.

ಇವರೆಲ್ಲರಿಗೂ ತಲಾ 19,000 ಡಾಲರ್‌ಗಳ ಬಾಂಡ್ ಮೇಲೆ ಷರತ್ತಿನ ಜಾಮೀನು ನೀಡಿದೆ.
ಮುಂದಿನ ವಿಚಾರಣೆಯನ್ನು ಈ ತಿಂಗಳ 12 ಮತ್ತು 13ರವರೆಗೆ ಮುಂದೂಡಲಾಗಿದೆ.

ಆರೋಪಿಗಳು ಆಫ್ತಿಕಾದ ಅತಿದೊಡ್ಡ ಸರಕು ಸಾಗಾಣಿಕೆ ಕೇಂದ್ರವಾದ ಲಾಗಾಸ್‌ನ ಅಪಾಪ ಕ್ವೇ ವಿಮಾನ ನಿಲ್ದಾಣದ ಮೂಲಕ ಹದಿನೈದು ದಿನಗಳ ಹಿಂದೆ ಈ ತುಂಡು ಲೋಹಗಳನ್ನು ರಫ್ತು ಮಾಡಲು ಯತ್ನಿಸಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.