
ಪ್ರಜಾವಾಣಿ ವಾರ್ತೆಬೀಜಿಂಗ್ (ಐಎಎನ್‌ಎಸ್):  ಹನ್ನೊಂದು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಕಾಮುಕ ಅಧಿಕಾರಿಯೊಬ್ಬನನ್ನು ಚೀನಾದಲ್ಲಿ ಗಲ್ಲಿಗೇರಿಸಲಾಗಿದೆ.
 ಹೆನಾನ್ ಪ್ರಾಂತ್ಯದ ಯಾಂಗ್‌ಚೆಂಗ್ ನಗರದ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ (ಸಿಪಿಸಿ) ನಿವೃತ್ತ ಪ್ರಧಾನ ಕಾರ್ಯದರ್ಶಿ ಲಿ ಕ್ಸಿಂಗಾಂಗ್ ಗಲ್ಲಿಗೇರಿದ ಅತ್ಯಾಚಾರಿ.
 
 2011ರಲ್ಲಿ ಹನ್ನೊಂದು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದ. ಈ ಘಟನೆ ಜನರ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಕ್ಸಿಂಗಾಂಗ್‌ನನ್ನು 2012ರ ಮೇ ನಲ್ಲಿ ಬಂಧಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.