ADVERTISEMENT

ಅಮೆರಿಕಕ್ಕೆ ರವಾನೆಯಾಗಿದ್ದ ಬಿನ್ ಲಾಡೆನ್ ಶವ?

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2012, 19:30 IST
Last Updated 7 ಮಾರ್ಚ್ 2012, 19:30 IST

ಲಂಡನ್ (ಪಿಟಿಐ): ಅಮೆರಿಕ ಯೋಧರಿಂದ ಹತ್ಯೆಗೀಡಾದ ಅಲ್ ಖೈದಾ ಪಾತಕಿ ಒಸಾಮ ಬಿನ್ ಲಾಡೆನ್‌ನ ಶವವನ್ನು  ಅಂತ್ಯಸಂಸ್ಕಾರಕ್ಕಾಗಿ ಅಮೆರಿಕಕ್ಕೆ ರವಾನಿಸಲಾಗಿತ್ತು ಎಂದು ಖಾಸಗಿ ಬೇಹುಗಾರಿಕಾ ವಿಶ್ಲೇಷಣಾ ಸಂಸ್ಥೆಯಿಂದ ಸೋರಿಕೆಯಾಗಿರುವ ಇ-ಮೇಲ್‌ಗಳು ಸೂಚಿಸಿವೆ.

ಹತ್ಯೆಗೀಡಾದ ಒಸಾಮನ ಶವವನ್ನು ಸಮುದ್ರದಲ್ಲಿ ಸಮಾಧಿ ಮಾಡಲಾಯಿತು ಎಂದು ಅಮೆರಿಕ ಈವರೆಗೆ ಹೇಳಿಕೊಂಡು ಬಂದಿತ್ತು. ಆದರೆ ಈಗ ಸೋರಿಕೆಯಾಗಿರುವ ಇ ಮೇಲ್‌ಗಳಿಂದಾಗಿ ಅಮೆರಿಕದ ಹೇಳಿಕೆಯ ಬಗ್ಗೆ ಶಂಕೆ ಮೂಡಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.