ADVERTISEMENT

ಅಮೆರಿಕದ ಉದ್ಯೋಗ ವೀಸಾ ನಿರಾಕರಣೆ: ಭಾರತೀಯರೇ ಹೆಚ್ಚು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 19:30 IST
Last Updated 10 ಫೆಬ್ರುವರಿ 2012, 19:30 IST

ವಾಷಿಂಗ್ಟನ್ (ಪಿಟಿಐ): ಇತರ ದೇಶಗಳಿಗೆ ಹೋಲಿಸಿದರೆ, ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಭಾರತೀಯ ಮೂಲದ ವೃತ್ತಿಪರರಿಗೆ ಉದ್ಯೋಗ ವೀಸಾ ನೀಡಲು ಅಮೆರಿಕದ ವಲಸೆ ಅಧಿಕಾರಿಗಳು ನಿರಾಕರಿಸಿದ ಸಂದರ್ಭಗಳು ಹೆಚ್ಚಿವೆ ಎಂದು ಸ್ಥಳೀಯ ಮಾಧ್ಯಮದಲ್ಲಿ ವರದಿಯಾಗಿದೆ.

2008ರಿಂದ ಎಲ್-1 ಮತ್ತು ಎಚ್-1ಬಿ ವೀಸಾಕ್ಕಾಗಿ ಸಲ್ಲಿಸಿದ ಅನೇಕ ಅರ್ಜಿ ತಿರಸ್ಕರಿಸಲಾಗಿದೆ ಎಂದು ಅಮೆರಿಕದ ಪೌರತ್ವ ಮತ್ತು ವಲಸೆ ಸೇವಾ ಇಲಾಖೆಯ ವರದಿ ಆಧರಿಸಿ ವಿಶ್ಲೇಷಿಸಲಾಗಿದೆ. ವೀಸಾಕ್ಕಾಗಿ ಅರ್ಜಿ ಸಲ್ಲಿಸಿದವರಲ್ಲಿ ಭಾರತೀಯ ಮೂಲದ ವೃತ್ತಿಪರರು ಮತ್ತು ಸಂಶೋಧನಾಕಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸ್ಥಳೀಯ ಉದ್ಯೋಗಿಗಳು ಮತ್ತು ಕಂಪೆನಿಗಳಿಗೆ ಎದುರಾಗಿರುವ ಪ್ರಬಲ ಸ್ಪರ್ಧೆ ಭಾರತೀಯರಿಗೆ ವೀಸಾ ನಿರಾಕರಿಸಲು ಕಾರಣ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.