ADVERTISEMENT

ಅಮೆರಿಕನ್ನರ ಮನಗೆದ್ದ ‘ಲಂಚ್‌ ಬಾಕ್ಸ್‌’

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 19:30 IST
Last Updated 6 ಮಾರ್ಚ್ 2014, 19:30 IST

ವಾಷಿಂಗ್ಟನ್‌(ಐಎಎನ್‌ಎಸ್‌) : ಹಾಲಿವುಡ್‌ ಸಿನಿಮಾ­ಗಳನ್ನು ಹಿಂದಿಕ್ಕಿರುವ ಭಾರತದ ಚಲನಚಿತ್ರ ‘ಲಂಚ್‌ ಬಾಕ್ಸ್‌’  ಉತ್ತರ ಅಮೆರಿಕದ ಚಲನಚಿತ್ರ ಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಉತ್ತರ ಅಮೆರಿಕದಲ್ಲಿ ಪ್ರದರ್ಶನಗೊಂಡ  ಎಲ್ಲಾ ಸಿನಿಮಾಗಳಿಗಿಂತ ರಿತೇಶ್‌ ಬಾತ್ರಾ ಅವರ ನಿರ್ದೇಶನದ ಬಾಲಿವುಡ್‌ ಸಿನಿಮಾ ‘ಲಂಚ್‌ ಬಾಕ್ಸ್‌’ ಅತಿ ಹೆಚ್ಚು ಯಶಸ್ವಿಯಾಗಿ ಪ್ರದರ್ಶನಗೊಂಡಿದೆ.

ನ್ಯೂಯಾರ್ಕ್‌ ಮತ್ತು ಲಾಸ್‌ ಏಂಜಲೀಸ್‌ನಲ್ಲಿ ಸಿನಿಮಾ ಯಶಸ್ವಿಯಾದ ಕಾರಣ ಮಾ. 7 ಕ್ಕೆ ಅಮೆರಿಕದ ಉಳಿದ ನಗರಗಳಾದ ವಾಷಿಂಗ್ಟನ್‌, ಸ್ಯಾನ್‌ ಫ್ರಾನ್ಸಿಸ್ಕೋ, ಷಿಕಾಗೋದಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಇತ್ತೀಚಿನ ಭಾರತೀಯ ಸಿನಿಮಾಗಳಲ್ಲೇ ‘ಲಂಚ್‌ಬಾಕ್ಸ್‌’ ಅತ್ಯುತ್ತಮ ಸಿನಿಮಾ ಎಂದು ಅಮೆರಿಕದ ಸಿನಿಮಾ ವಿಮರ್ಶಕರು ನ್ಯೂಯಾರ್ಕ್‌ ಟೈಮ್ಸ್‌, ಲಾಸ್‌ ಏಂಜಲೀಸ್‌ ಟೈಮ್ಸ್‌, ವಾಲ್‌ ಸ್ಟ್ರೀಟ್‌ ಜರ್ನಲ್‌ಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್‌ ಶೈಲಿಗಿಂತ ಹಾಲಿವುಡ್‌ ಶೈಲಿ ಹೆಚ್ಚು ಎದ್ದು ಕಾಣುತ್ತದೆ. ಅದರಲ್ಲೂ ಇದು ಹಳೆಯ ಹಾಲಿವುಡ್‌ ಚಿತ್ರಗಳಂತೆ ಇದೆ ಎಂದು ವಿಮರ್ಶಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.