ADVERTISEMENT

ಅಮೆರಿಕ: ಗರಿಷ್ಠ ಮಿತಿ ತಲುಪಿದ ಎಚ್–1ಬಿ ವೀಸಾ

ಪಿಟಿಐ
Published 7 ಏಪ್ರಿಲ್ 2018, 20:15 IST
Last Updated 7 ಏಪ್ರಿಲ್ 2018, 20:15 IST
ಅಮೆರಿಕ: ಗರಿಷ್ಠ ಮಿತಿ ತಲುಪಿದ  ಎಚ್–1ಬಿ ವೀಸಾ
ಅಮೆರಿಕ: ಗರಿಷ್ಠ ಮಿತಿ ತಲುಪಿದ ಎಚ್–1ಬಿ ವೀಸಾ   

ವಾಷಿಂಗ್ಟನ್: 2019ರ ಆರ್ಥಿಕ ವರ್ಷದಲ್ಲಿ ನೀಡುವ ಎಚ್–1ಬಿ ವೀಸಾ ಮಿತಿಯನ್ನು 65,000ಕ್ಕೆ ನಿಗದಿಗೊಳಿಸಿದ್ದು, ಈಗಾಗಲೇ ಈ ಗಡಿ ತಲುಪಿದೆ ಎಂದು ಅಮೆರಿಕ ನಾಗರಿಕ ಮತ್ತು ವಲಸೆ ವಿಭಾಗ (ಯುಎಸ್‌ಸಿಐಎಸ್) ಹೇಳಿದೆ.

ಅರ್ಹರ ಆಯ್ಕೆ ಮಾಡಲು ಲಾಟರಿ ಪದ್ಧತಿ ಅನುಸರಿಸಲಾಗುವುದು’ ಎಂದು ಯುಎಸ್‌ಸಿಐಎಸ್ ತಿಳಿಸಿದೆ. 2018ರ ಅಕ್ಟೋಬರ್ 1ರಿಂದ ಆರ್ಥಿಕ ವರ್ಷ ಆರಂಭವಾಗುತ್ತದೆ.

ಕೌಶಲ ಆಧರಿತ ಉದ್ಯೋಗ ಅರಸಿ ಬೇರೆ ದೇಶಗಳಿಂದ ಅಮೆರಿಕಕ್ಕೆ ಬರುವ ಅಭ್ಯರ್ಥಿಗಳಿಗೆ ಎಚ್–1ಬಿ ವೀಸಾ ನೀಡಲಾಗುತ್ತದೆ. ಭಾರತ, ಚೀನಾದ ಅಭ್ಯರ್ಥಿಗಳು ಇದರ ಹೆಚ್ಚಿನ ಫಲಾನುಭವಿಗಳು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.