ADVERTISEMENT

ಅಮೆರಿಕ ವಾಯುಪಡೆಗೆ ಮಹಿಳಾ ಮುಖ್ಯಸ್ಥರು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 19:59 IST
Last Updated 2 ಆಗಸ್ಟ್ 2013, 19:59 IST

ವಾಷಿಂಗ್ಟನ್ (ಐಎಎನ್‌ಎಸ್): ರಕ್ಷಣಾ ಇಲಾಖೆಯ ನಿವೃತ್ತ ಸಹಾಯಕ ಕಾರ್ಯದರ್ಶಿ ದೆಬೊರಾ ಲೀ ಜೇಮ್ಸ ಅವರನ್ನು ವಾಯುಪಡೆ ಮುಖ್ಯಸ್ಥೆಯನ್ನಾಗಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ನೇಮಿಸಿದ್ದಾರೆ.

5 ವರ್ಷ ಸೇವಾವಧಿ ಮುಗಿಸಿ ನಿವೃತ್ತರಾದ ಮೈಕೆಲ್ ಡೊನ್ಲೆ ಅವರ ಸ್ಥಾನವನ್ನು ಜೇಮ್ಸ ತುಂಬಲಿದ್ದಾರೆ. `ಸಾರ್ವಜನಿಕ ಸೇವೆ, ಖಾಸಗಿ ವಲಯದಲ್ಲಿ ಜೇಮ್ಸ ಅವರ ಮಹತ್ವದ ಕಾರ್ಯವೈಖರಿ ಗಮನಿಸಿದ್ದೇನೆ. ಹೀಗಾಗಿ ಅವರು ವಾಯುಪಡೆ ಮುಖ್ಯಸ್ಥೆಯಾಗಲು ಅರ್ಹರೆಂದು ಭಾವಿಸಿ ನೇಮಿಸಿದ್ದೇನೆ' ಎಂಬ ಒಬಾಮಾ ಹೇಳಿಕೆಯನ್ನು ಶ್ವೇತಭವನ ಶುಕ್ರವಾರ ಪ್ರಕಟಿಸಿದೆ.

ದೆಬೊರಾ ಜೇಮ್ಸ ಅವರು ಪ್ರಸ್ತುತ ಸೈನ್ಸ್‌ಅಪ್ಲಿಕೇಶನ್ಸ್ ಇಂಟರ್‌ನ್ಯಾಷನಲ್ ಕಾರ್ಪೊರೇಶನ್‌ನ (ಎಸ್‌ಎಐಸಿ) ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆಯಾಗಿ 2004ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.

ರಕ್ಷಣಾ ಇಲಾಖೆಯ ಸಹಾಯಕ ಕಾರ್ಯದರ್ಶಿಯಾಗಿ ಅವರು 1993ರಿಂದ 98ರವರೆಗೆ ಸೇವೆ ಸಲ್ಲಿಸಿದ್ದಾರೆ. ಜೇಮ್ಸ ಅವರ ನೇಮಕಕ್ಕೆ ಸೆನೆಟ್ ಒಪ್ಪಿಗೆ ನೀಡಿದರೆ, ಸಶಸ್ತ್ರ ಸೇವಾ ಇಲಾಖೆಗೆ ಸೇವೆಗೆ ಸೇರಿದ ಕೆಲವೇ ಕೆಲವು ಮಹಿಳೆಯರ ಪೈಕಿ ಅವರೂ ಒಬ್ಬರಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.