ADVERTISEMENT

ಅಮೆರಿಕ: ಸಿಖ್ ಶತಮಾನೋತ್ಸವ

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 19:59 IST
Last Updated 16 ಜುಲೈ 2013, 19:59 IST

ವಾಷಿಂಗ್ಟನ್ (ಐಎಎನ್‌ಎಸ್): ಅಮೆರಿಕದಲ್ಲಿ ನೆಲೆಸಿರುವ ಸಿಖ್ ಸಮುದಾಯಕ್ಕೆ ಇದೀಗ ನೂರರ ಸಂಭ್ರಮ.

1913ರಲ್ಲಿ ಮೊದಲ ಬಾರಿಗೆ ಇಲ್ಲಿಗೆ ಬಂದ ಅಮೃತಸರದ ಭಗತ್‌ಸಿಂಗ್ ತಿಂಡ್, ಸಿಖ್ ಸಮುದಾಯಕ್ಕೆ ಅಮೆರಿಕದ ಪೌರತ್ವ ದೊರಕಿಸಿಕೊಡಲು ಬದುಕಿನುದ್ದಕ್ಕೂ ಹೋರಾಡಿದರು.

30 ವರ್ಷಗಳ ಇತಿಹಾಸದಲ್ಲಿ ಅಮೆರಿಕದ ಸೇನೆಯಲ್ಲಿ ಮೂವರಿಗೆ ಮಾತ್ರ ಸಾಂಪ್ರದಾಯಿಕ ಪೇಟ ಧರಿಸಲು ಅವಕಾಶ ಇತ್ತು. ಈ ವಿಷಯದಲ್ಲಿ ತಿಂಡ್ ಮೊದಲಿಗರಾಗಿದ್ದರು.

ಶತಮಾನೋತ್ಸವದ ಅಂಗವಾಗಿ ಕಳೆದ ವಾರ ಶ್ವೇತ ಭವನ ಹಾಗೂ ಸಿಖ್ ಧಾರ್ಮಿಕ ಶಿಕ್ಷಣ ಮಂಡಳಿ (ಎಸ್‌ಸಿಒಆರ್‌ಇ)ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸಿಖ್ ಸಮುದಾಯದ 150ಕ್ಕೂ ಹೆಚ್ಚು ಉದ್ಯಮಿಗಳು, ವಿವಿಧ ಕಂಪೆನಿಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಇದರಲ್ಲಿ ಪಾಲ್ಗೊಂಡಿದ್ದರು. ನೂರು ವರ್ಷಗಳಲ್ಲಿ ಸಿಖ್ ಸಮುದಾಯ  ಎದುರಿಸಿದ ಸವಾಲುಗಳು, ದುರಂತಗಳು ಹಾಗೂ ವಿವಿಧ ಕ್ಷೇತ್ರದಲ್ಲಿನ ಸಾಧನೆ ಕುರಿತು ಈ ಸಂದರ್ಭದಲ್ಲಿ ಚರ್ಚಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.