
ಪ್ರಜಾವಾಣಿ ವಾರ್ತೆಮಾಸ್ಕೊ (ಐಎಎನ್‌ಎಸ್/ಆರ್‌ಐಎ): ಆಫ್ಘಾನಿಸ್ತಾನದ ದಕ್ಷಿಣ ಭಾಗದ ಕಂದಹಾರ ಪ್ರಾಂತದಲ್ಲಿ ಅಮೆರಿಕದ ಸೈನಿಕರು ಭಾನುವಾರ 17 ಜನರನ್ನು ಹತ್ಯೆಗೈದಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಮೆರಿಕ ಸೇನಾ ನೆಲೆಗೆ ಬಂದ ಸೈನಿಕರು ನಾಗರಿಕರ ಮೇಲೆ ಗುಂಡು ಹಾರಿಸಿದರು. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ ಎಂದು ಪ್ರಾಂತದ ರಾಜ್ಯಪಾಲ ಟ್ಯೂರ್ಯಲೈ ವೆಸಾ ಹೇಳಿದ್ದಾರೆ. ಆದರೆ ನಿಖರ ಅಂಕಿ ಅಂಶಗಳನ್ನು ಅವರು ನೀಡಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.