ADVERTISEMENT

ಅರೆತಲೆಶೂಲೆ- ಮೆದುಳಿಗೆ ಧಕ್ಕೆ ಇಲ್ಲ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2012, 19:30 IST
Last Updated 12 ಆಗಸ್ಟ್ 2012, 19:30 IST

ವಾಷಿಂಗ್ಟನ್ (ಪಿಟಿಐ): ಅರೆ ತಲೆಶೂಲೆಯಿಂದ ಅಸಹನೀಯ ತಲೆನೋವು ಬರುತ್ತದೆ ಹೊರತೂ ಮೆದುಳಿನ ಸಂವೇದನಾ ಶಕ್ತಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಮಹಿಳೆಯರ ಕುರಿತ ಹೊಸ ಅಧ್ಯಯನ ಹೇಳಿದೆ.

ಶೇ 20ರಷ್ಟು ಮಹಿಳೆಯರಿಗೆ ಬರುವ ಅರೆ ತಲೆಶೂಲೆಯು ಸಂವೇದನಾ ಶಕ್ತಿಯೊಂದಿಗೆ ಯಾವುದೇ ಸಂಬಂಧ ಹೊಂದಿರುವುದಿಲ್ಲ ಎಂದು ಈ ಬಗ್ಗೆ ಸಂಶೋಧನೆ ನಡೆಸಿರುವ ಬ್ರಿಗ್ಯಾಮ್ ಮತ್ತು ಮಹಿಳಾ ಆಸ್ಪತ್ರೆ ಪ್ರತಿಪಾದಿಸಿದೆ.

`ಈ ಹಿಂದೆ ನಡೆಸಿದ ಅಧ್ಯಯನಯಗಳು ಅರೆ ತಲೆಶೂಲೆ ಮತ್ತು ಸಂವೇದನಾ ಶಕ್ತಿಯ ಕುಂದುವುದರ ಮೇಲೆ ಅತ್ಯಲ್ಪ ಮತ್ತು ಇವುಗಳ ನಡುವಿನ ಸಂಬಂಧದ ಬಗ್ಗೆ ನಿಖರವಾಗಿ ಗುರುತಿಸಲು ಸಾಧ್ಯವಾಗಿಲ್ಲ. ಆದರೆ ನಮ್ಮ ಅಧ್ಯಯನ ವಿಶಾಲವಾಗಿದ್ದು, ತಲೆಶೂಲೆಯ ನೋವಿನಿಂದ ಸಂವೇದನಾ ಶಕ್ತಿ ಕುಂದುವುದಿಲ್ಲ ಎಂಬುದನ್ನು ಸಾಬೀತು ಪಡಿಸಿದೆ~ ಎಂದು ಈ ಅಧ್ಯಯನದ ಲೇಖಕ ಪಮೇಲ್ ರಿಸ್ಟ್ ಹೇಳಿದ್ದಾರೆ.

45 ವರ್ಷ ವಯಸ್ಸಿನ  40 ಸಾವಿರ ಮಹಿಳೆಯರನ್ನು ಅಧ್ಯಯನಕ್ಕೆ ಬಳಸಿಕೊಂಡು ಬಂದಿರುವ ದತ್ತಾಂಶಗಳನ್ನು ಆಧಾರವಾಗಿಟ್ಟುಕೊಂಡು ಇದನ್ನು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.