ADVERTISEMENT

ಅಲ್‌ಖೈದಾ ಪೂರ್ವ ಆಫ್ರಿಕಾದ ಮುಖ್ಯಸ್ಥನ ಹತ್ಯೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2011, 19:30 IST
Last Updated 12 ಜೂನ್ 2011, 19:30 IST

ವಾಷಿಂಗ್ಟನ್ (ಪಿಟಿಐ): ಅಲ್‌ಖೈದಾದ ಪೂರ್ವ ಆಫ್ರಿಕಾದ ಮುಖ್ಯಸ್ಥ  ಅಬ್ದುಲ್ಲಾ ಮೊಹಮ್ಮದ್ ಸೊಮಾಲಿಯಾದಲ್ಲಿ ಹತ್ಯೆಯಾಗಿದ್ದಾನೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ಇದು ಪೂರ್ವ ಆಫ್ರಿಕಾದಲ್ಲಿ ಅಲ್‌ಖೈದಾದ ಕಾರ್ಯಾಚರಣೆಗೆ ತೀವ್ರ ಹೊಡೆತ ನೀಡಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಹೇಳಿದ್ದಾರೆ.

ಕೀನ್ಯಾ ಮತ್ತು ತಾಂಜಾನಿಯಾದಲ್ಲಿ ಅಮೆರಿಕದ ರಾಯಭಾರ ಕಚೇರಿಗಳನ್ನು ಸ್ಫೋಟಿಸಿದ್ದ ಆರೋಪದ ಮೇಲೆ ಮೊಹಮ್ಮದ್ ಸೊಮಾಲಿಯಾದ ಪೊಲೀಸರಿಗೆ ಬೇಕಾಗಿದ್ದ ವ್ಯಕ್ತಿಯಾಗಿದ್ದ. ಗುಂಡಿನ ಕಾಳಗದಲ್ಲಿ ಮೊಹಮ್ಮದ್ ಹತ್ಯೆಯಾ ಗಿದ್ದಾರೆ ಎಂದು ಸೊಮಾಲಿ ಯಾದ ಸಚಿವ ಒಮರ್ ಒಸ್ಮಾನ್ ಖಚಿತ ಪಡಿ ಸಿದ್ದು ಇದು ತಮ್ಮ ಭದ್ರತಾ ಪಡೆಗಳ `ಬಹು ದೊಡ್ಡ ಯಶಸ್ಸು~ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.