ADVERTISEMENT

ಆತ್ಮಹತ್ಯಾ ದಾಳಿಗೆ 96 ಬಲಿ

​ಪ್ರಜಾವಾಣಿ ವಾರ್ತೆ
Published 21 ಮೇ 2012, 19:30 IST
Last Updated 21 ಮೇ 2012, 19:30 IST

ಸನಾ (ಎಎಫ್‌ಪಿ): ಸೇನೆಯ ಸಮವಸ್ತ್ರದಲ್ಲಿದ್ದ ಆತ್ಮಹತ್ಯಾ ದಾಳಿಕೋರನೊಬ್ಬ ಯೋಧರ ತಂಡದಲ್ಲಿ ತನ್ನನ್ನು ಸ್ಫೋಟಿಸಿಕೊಂಡ ಪರಿಣಾಮವಾಗಿ ಸುಮಾರು 96 ಜನರು ಮೃತಪಟ್ಟು 300ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಸೋಮವಾರ ಸನಾದಲ್ಲಿ ನಡೆದಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಹಾಗೂ ದಕ್ಷಿಣ ಯೆಮನ್‌ನ ಏಕೀಕರಣದ 22ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಯಬೇಕಿದ್ದ ಸೇನೆಯ ಪಥಸಂಚಲನಕ್ಕೆ ಸೈನಿಕರು ತಾಲೀಮು ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.

ಅಲ್- ಖೈದಾ ವಿರುದ್ಧ ಹೋರಾಡುವುದಾಗಿ ಪ್ರತಿಜ್ಞೆ ಮಾಡಿ, ನೂತನ ಅಧ್ಯಕ್ಷ ಅಬ್ದ್ರಬು  ಮನ್ಸೂರ್ ಹಾದಿ ಅವರು ಫೆಬ್ರುವರಿಯಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ನಡೆದ ಅತ್ಯಂತ ಮಾರಣಾಂತಿಕ ದಾಳಿ ಇದಾಗಿದೆ. ಈವರೆಗೆ ಯಾವ ಸಂಘಟನೆಯೂ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಯೆಮನ್ ರಕ್ಷಣಾ ಸಚಿವ ಮೊಹಮ್ಮದ್ ನಸ್ಸೆರ್ ಅಹ್ಮದ್ ಕೂದಲೆಳೆಯ ಅಂತರದಲ್ಲಿ ಈ ದಾಳಿಯಿಂದ ಪಾರಾಗಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.