ADVERTISEMENT

ಆಫ್ಘಾನಿಸ್ತಾನ: 37 ಉಗ್ರರ ಹತ್ಯೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2012, 10:20 IST
Last Updated 6 ಅಕ್ಟೋಬರ್ 2012, 10:20 IST

ಕಾಬೂಲ್ (ಐಎಎನ್‌ಎಸ್): ಆಫ್ಘಾನಿಸ್ತಾನದ ಭದ್ರತಾ ಪಡೆ ಮತ್ತು ತಾಲಿಬಾನ್ ಉಗ್ರಗಾಮಿಗಳ ನಡುವೆ ಶನಿವಾರ ನಡೆದ ಗುಂಡಿನ ದಾಳಿಯಲ್ಲಿ ಸುಮಾರು 37 ತಾಲಿಬಾನಿ ಉಗ್ರಗಾಮಿಗಳು ಹತ್ಯೆಗೀಡಾಗಿದ್ದಾರೆ ಎಂದು ಆಫ್ಘಾನಿಸ್ತಾನದ ಆಂತರಿಕ ಸಚಿವರು ತಿಳಿಸಿದ್ದಾರೆ.

 ಶುಕ್ರವಾರ ತಡರಾತ್ರಿ ನ್ಯಾಟೋ ಪಡೆಗಳ ನೇತೃತ್ವದಲ್ಲಿ ಆಫ್ಘಾನಿಸ್ತಾನ ಪೋಲಿಸರು ಹಾಗೂ ಸೇನಾ ಪಡೆಗಳು ನಡೆಸಿದ ಜಂಟಿ ಕಾರ್ಯಚರಣೆಯಲ್ಲಿ ಉಗ್ರಗಾಮಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.