ADVERTISEMENT

ಆರ್ಥಿಕ ಸಮಸ್ಯೆ ಪರಿಹಾರಕ್ಕೆ ಸಮಾಜವಾದ ಸೂಕ್ತವಲ್ಲ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2012, 19:30 IST
Last Updated 5 ಫೆಬ್ರುವರಿ 2012, 19:30 IST

ಹವಾನ (ಐಎಎನ್‌ಎಸ್): `ಎಲ್ಲಾ ಆರ್ಥಿಕ ಸಮಸ್ಯೆಗಳ ಪರಿಹಾರಕ್ಕೆ ಸಮಾಜವಾದ ಸೂಕ್ತ ಎನ್ನುವ ನಂಬಿಕೆ ಸುಳ್ಳಾಗಿದೆ~ ಎಂದು ಕ್ಯೂಬಾ ಕ್ರಾಂತಿಯ ಹರಿಕಾರ ಫೀಡಲ್ ಕ್ಯಾಸ್ಟ್ರೊ ಇದೀಗ ಒಪ್ಪಿಕೊಂಡಿದ್ದಾರೆ.

ಅನಾರೋಗ್ಯದ ಕಾರಣ 2006ರಲ್ಲಿ ಅಧಿಕಾರ ತ್ಯಜಿಸಿದ ಕ್ಯಾಸ್ಟ್ರೊ ಶುಕ್ರವಾರ ಪತ್ರಕರ್ತ ಕತಿಯುಸ್ಕಾ ಬಲಾನ್ಕೊ ಸಂಪಾದಿಸಿದ `ಗೆರಿಲ್ಲೆರೊ ಡೇಲ್ ಟಿಂಪೊ~ ಕೃತಿ ಬಿಡುಗಡೆ ಮಾಡಿ, ಸುಮಾರು 6 ಗಂಟೆ ಕಾಲ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು.

ಸುಮಾರು ಒಂದು ಸಾವಿರ ಪುಟಗಳ ಮೊದಲ ಸಂಪುಟದಲ್ಲಿ ಕ್ಯಾಸ್ಟ್ರೊ ಬಾಲ್ಯ ಜೀವನ ಮತ್ತು 1958ರ ಗೆರಿಲ್ಲಾ ಚಳವಳಿಯ ಯಶಸ್ಸಿನ ಬಗ್ಗೆ ಮಾಹಿತಿ ಒಳಗೊಂಡಿದೆ. ಗೆರಿಲ್ಲಾ ಚಳವಳಿಯ ಯಶಸ್ಸಿನಿಂದಾಗಿ ಸರ್ವಾಧಿಕಾರಿ ಬತಿಸ್ಟಾ ಅಧಿಕಾರ ತ್ಯಜಿಸುವಂತಾಗಿತ್ತು. ಕ್ಯಾಸ್ಟ್ರೊ ಕುಟುಂಬದ ಚರಿತ್ರೆಯ ಬಗ್ಗೆ ಕೂಡಾ ಬಲಾನ್ಕೊ ಕೃತಿ ರಚನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.