ADVERTISEMENT

ಆಸ್ಕರ್‌ಗೆ ರೆಹಮಾನ್ ನಾಮನಿರ್ದೇಶನ

​ಪ್ರಜಾವಾಣಿ ವಾರ್ತೆ
Published 25 ಜನವರಿ 2011, 19:30 IST
Last Updated 25 ಜನವರಿ 2011, 19:30 IST

ಲಾಸ್ ಏಂಜಲೀಸ್ (ಪಿಟಿಐ): ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಈ ಬಾರಿಯ ಆಸ್ಕರ್ ಪ್ರಶಸ್ತಿಯ ಎರಡು ವಿಭಾಗಗಳಿಗೆ ನಾಮನಿರ್ದೇಶನಗೊಂಡಿದ್ದಾರೆ.

ಡ್ಯಾನಿ ಬೊಯ್ಲೆ ನಿರ್ದೇಶನದ  ಚಲನಚಿತ್ರ ‘127 ಅವರ್ಸ್‌’ಗೆ ನೀಡಿದ ಸಂಗೀತಕ್ಕಾಗಿ ಈ ಅವಕಾಶ ಲಭ್ಯವಾಗಿದ್ದು ಹಲವು ಪ್ರಮುಖರೊಂದಿಗೆ ಅವರು ಸೆಣಸಲಿದ್ದಾರೆ.2009ರಲ್ಲಿ ರೆಹಮಾನ್ ಅವರಿಗೆ ಎರಡು ಅಕಾಡೆಮಿ ಪ್ರಶಸ್ತಿಗಳು ಲಭಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.