ಲಾಸ್ ಏಂಜಲೀಸ್ (ಪಿಟಿಐ): ಆಸ್ಕರ್ ಪ್ರಶಸ್ತಿಯ ನಾಮನಿರ್ದೇಶನದಲ್ಲಿ ವೈವಿಧ್ಯದ ಕೊರತೆಯಿದೆ ಎನ್ನುವ ಮೂಲಕ ಆಸ್ಕರ್ ಅಕಾಡೆಮಿ ಅಧ್ಯಕ್ಷೆ ಚೆರಿಲ್ ಬೂನ್ ಐಸಾಕ್ ಪರೋಕ್ಷವಾಗಿ ಪ್ರಶಸ್ತಿ ಹಂಚಿಕೆಯಲ್ಲಿನ ವರ್ಣಭೇದದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಶಸ್ತಿಯ ನಾಮನಿರ್ದೇಶನದಲ್ಲಿ ಎಲ್ಲರನ್ನೂ ಒಳಗೊಳ್ಳಬೇಕಾದ ಮಹತ್ವದ ಸಂಗತಿ ಕಡೆಗಣನೆಯಾಗಿದೆ. ಇದು ನನ್ನ ಹೃದಯಕ್ಕೆ ನೋವು ತಂದಿದ್ದು, ನಿರಾಸೆ ಉಂಟು ಮಾಡಿದೆ ಎಂದು ಚೆರಿಲ್ ಹೇಳಿದ್ದಾರೆ.
ಆಸ್ಕರ್ ಸಮಿತಿಯ ಸದಸ್ಯತ್ವ ನೇಮಕದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಕೆಲ ಬದಲಾವಣೆಗಳನ್ನು ತರಲಾಗಿದೆ. ಆದರೆ, ನಾವು ಬಯಸಿದಷ್ಟು ವೇಗವಾಗಿ ಬದಲಾವಣೆ ಆಗುತ್ತಿಲ್ಲ. ಅದು ಈಗಿನ ತುರ್ತು ಅಗತ್ಯವಾಗಿದೆ’ ಎಂದು ಅವರು ಪ್ರತಿಪಾದಿಸಿದ್ದಾರೆ.
ಸತತ ಎರಡನೇ ವರ್ಷವೂ ನಟನಾ ವಿಭಾಗದಲ್ಲಿ ಕಪ್ಪು ವರ್ಣೀಯರನ್ನು ಪರಿಗಣಿಸಿಲ್ಲ ಎಂದು ಆರೋಪಿಸಿರುವ ನಿರ್ದೇಶಕ ಸ್ಪೀಕ್ ಲೀ ಮತ್ತು ನಟಿ ಪಿಂಕೆಟ್ ಸ್ಮಿತ್, ಫೆಬ್ರುವರಿ 28ರಂದು ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.