ADVERTISEMENT

ಆಸ್ಪತ್ರೆಯಲ್ಲೇ ಸೋನಿಯಾಗೆ ಸಮನ್ಸ್

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 19:59 IST
Last Updated 11 ಸೆಪ್ಟೆಂಬರ್ 2013, 19:59 IST

ನ್ಯೂಯಾರ್ಕ್ (ಪಿಟಿಐ): ೧೯೮೪ರ ದೆಹಲಿ ಸಿಖ್ ವಿರೋಧಿ ಗಲಭೆಯಲ್ಲಿಆರೋಪಿತ ಕಾಂಗ್ರೆಸ್ ಮುಖಂಡರನ್ನು ರಕ್ಷಿಸಲಾಗುತ್ತಿದೆ ಎಂದು ದೂರಿ ಇಲ್ಲಿನ ಸಿಖ್ ಸಂಘಟನೆಯೊಂದು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಅಮೆರಿಕದ ಫೆಡರಲ್ ಕೋರ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋನಿಯಾ ಗಾಂಧಿ ಅವರಿಗೆ ಸಮನ್ಸ್ ಹೊರಡಿಸಿದೆ. 

ನ್ಯಾಯಾಧೀಶ ಬ್ರೇನ್ ಎಂ. ಕೊಗನ್ ಅವರ ನಿರ್ದೇಶನದಂತೆ ಸಮನ್ಸ್ ಪ್ರತಿಯನ್ನು ‘ಸಿಖ್ಸ್ ಫಾರ್ ಜಸ್ಟಿಸ್’ ಸಂಘಟನೆಯ ಸದಸ್ಯರು ಆಸ್ಪತ್ರೆಗೆ ತಲುಪಿಸಿದ್ದು, ರಾತ್ರಿ ಪಾಳಿ ಶುಶ್ರೂಷಾ ಮೇಲ್ವಿಚಾರಕರಿಗೆ ತಲುಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.