ADVERTISEMENT

ಆ್ಯಪಲ್‌ ಕಂಪೆನಿ ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2014, 19:30 IST
Last Updated 7 ಮಾರ್ಚ್ 2014, 19:30 IST

ಸ್ಯಾನ್‌ ಜೋಸ್‌(ಎಪಿ): ಸ್ಯಾಮ್ಸಂಗ್‌ ಕಂಪೆನಿಯ 23 ವಿವಿಧ  ಮಾದರಿಯ ಸ್ಮಾರ್ಟ್‌ಫೋನ್ ಹಾಗೂ ಟ್ಯಾಬ್ಲೆಟ್‌ ನಿಷೇಧಿಸುವಂತೆ ಆ್ಯಪಲ್‌ ಕಂಪೆನಿ ಸಲ್ಲಿಸಿದ್ದ ಅರ್ಜಿಯನ್ನು ಕ್ಯಾಲಿಫೋರ್ನಿಯಾದ ಫೆಡರಲ್‌ ನ್ಯಾಯಾಲಯ ತಳ್ಳಿ ಹಾಕಿದೆ. 

ಸ್ಯಾಮ್ಸಂಗ್‌ ಕಂಪೆನಿ ಹಕ್ಕುಸ್ವಾಮ್ಯ ಉಲ್ಲಂಘಿಸಿರುವ ಕಾರಣ ತಮ್ಮ ಸರಕುಗಳ ಮಾರಾಟಕ್ಕೆ  ಹಾನಿಯಾಗುತ್ತಿದೆ ಎಂದು ನಿರೂಪಿಸಲು ಆ್ಯಪಲ್‌ ಕಂಪೆನಿ ವಿಫಲ­ವಾಗಿರುವುದರಿಂದ ಅರ್ಜಿ ತಿರಸ್ಕರಿಸ­ಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಸ್ಯಾಮ್ಸಂಗ್‌ ಕಂಪೆನಿ ತನ್ನ ಐಪಾಡ್‌ ಹಾಗೂ ಐಫೋನ್‌ ಹಕ್ಕುಸ್ವಾಮ್ಯ ನಕಲಿ ಮಾಡಿದೆ ಎಂದು ಆ್ಯಪಲ್‌ ಈ ಪ್ರಕರಣ ದಾಖಲಿಸಿತ್ತು. 2 ಡಜನ್‌­ಗಿಂತಲೂ ಅಧಿಕ ಸ್ಯಾಮ್ಸಂಗ್‌ ಫೋನ್‌ಗಳು ಆ್ಯಪಲ್‌ ತಾಂತ್ರಿಕತೆ ಆಧಾರದ ಮೇಲೆ ಕಾರ್ಯ­ನಿರ್ವಹಿಸುತ್ತಿವೆ ಎಂದು 2012ರಲ್ಲಿ ತಂತ್ರಜ್ಞರ ಸಮಿತಿ ದೃಢಪಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.