ADVERTISEMENT

ಇಂಗ್ಲೆಂಡ್‌ನಲ್ಲಿ ಪಿಜ್ಜಾ ಟಾಪಿಂಗ್‌ಗೆ ಕತ್ತರಿ!

ಪಿಟಿಐ
Published 12 ಅಕ್ಟೋಬರ್ 2018, 18:54 IST
Last Updated 12 ಅಕ್ಟೋಬರ್ 2018, 18:54 IST
ಪಿಜ್ಜಾ
ಪಿಜ್ಜಾ   

ಲಂಡನ್: ಸ್ಥೂಲಕಾಯ ಹೆಚ್ಚುತ್ತಿರುವುದರಿಂದ ಜನರ ಆರೋಗ್ಯ ಕಾಪಾಡಲು, ಪಿಜ್ಜಾ ಮೇಲೆ ಹಾಕುವ ಟಾಪಿಂಗ್ಸ್‌ ಕಡಿಮೆ ಮಾಡಲು ಇಂಗ್ಲೆಂಡ್‌ ಸರ್ಕಾರ ಮುಂದಾಗಿದೆ.

ಇದೊಂದೇ ಅಲ್ಲದೆ, ಸಿಹಿ ತಿನಿಸುಗಳು, ಸಿದ್ಧ ಆಹಾರ, ಸ್ಯಾಂಡ್‌ವಿಚ್ ಮುಂತಾದವುಗಳಲ್ಲಿನ ಕ್ಯಾಲೊರಿ ಪ್ರಮಾಣ ಇಳಿಸುವ ‘ಕ್ಯಾಲೊರಿ ಕ್ಯಾಪ್’ ಎಂಬ ಯೋಜನೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ಧರಿಸಲಾಗಿದೆ. ಸೂಪರ್‌ ಮಾರ್ಕೆಟ್‌ ಹಾಗೂ ರೆಸ್ಟೊರೆಂಟ್‌ಗಳಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT