ADVERTISEMENT

ಇಂಡೋನೇಷ್ಯಾದಲ್ಲಿ 6.7 ತೀವ್ರತೆಯ ಭೂಕಂಪ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 7:10 IST
Last Updated 12 ಅಕ್ಟೋಬರ್ 2012, 7:10 IST

ಜಕಾರ್ತ (ಪಿಟಿಐ): ಇಂಡೋನೇಷ್ಯಾದ ಪೂರ್ವ ಭಾಗದ ಪಪುವಾ ಪ್ರಾಂತ್ಯದಲ್ಲಿ 6.7 ತೀವ್ರತೆಯ ಭಾರಿ ಭೂಕಂಪನ ಸಂಭವಿಸಿದೆ. ಆದರೆ ಸುನಾಮಿ ಮುನ್ನೆಚ್ಚರಿಕೆ ನೀಡಲಾಗಿಲ್ಲ.

ಕಂಪನದ ಅನುಭವ ಇಲ್ಲಿನ ಹಲವು ದ್ವೀಪಗಳಲ್ಲಿ ಕಂಡು ಬಂದಿದೆ. ಕಟ್ಟಡಗಳು ಅದುರಿದ್ದು, ಜನರು ಭಯಭೀತರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಈವರೆಗೂ ಯಾವುದೇ ಸಾವುನೋವಿನ ವರದಿಯಾಗಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.